ಪ್ರತಿ ರೆಸ್ಟೋರೆಂಟ್ ಅಥವಾ ಉಪಾಹಾರ ಗೃಹದಲ್ಲಿ ಗ್ರಾಹಕರು ಅನುಸರಿಸಬೇಕಾದ ಕೆಲವು ನಿಯಮಗಳಿರುತ್ತವೆ. ಅದನ್ನು ಬೋರ್ಡ್ ನಲ್ಲಿ ಹಾಕಲಾಗಿರುತ್ತದೆ. ಗ್ರಾಹಕರು ಸಾಮಾನ್ಯವಾಗಿ ಅದನ್ನು ಪಾಲಿಸುತ್ತಾರೆ.
ಆದರೆ, ಲಂಡನ್ ನ ಕೆಫೆಯ ಹೊರಗಿನ ನಿಯಮಗಳ ದೀರ್ಘ ಪಟ್ಟಿಯು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಆ ನಿಯಮಗಳ ಪಟ್ಟಿ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಪಟ್ಟಿಯು ವಾಸ್ತವವಾಗಿ ಲಂಡನ್ನಲ್ಲಿರುವ ಕೋಸ್ಟಾ ಕಾಫಿ ಔಟ್ಲೆಟ್‌ನ ಹೊರಗಿತ್ತು. ಇದು “ನೋ ಸ್ಮೋಕಿಂಗ್” ನಂತಹ ಕೆಲವು ನಿಯಮಗಳನ್ನು ಒಳಗೊಂಡಿತ್ತು. ಆದರೆ, “ನೋ ಡಾಗ್ಸ್. ಡಿಫಿನಿಟ್ಲಿ ನೋ ಸ್ಮೋಕಿಂಗ್ ಡಾಗ್ಸ್” ಎಂಬ ನಿಯಮವು ನೆಟ್ಟಿಗರನ್ನು ಸ್ವಲ್ಪಮಟ್ಟಿಗೆ ಆಘಾತಕ್ಕೀಡು ಮಾಡಿದೆ ಹಾಗೂ ಗೊಂದಲಕ್ಕೀಡು ಮಾಡಿದೆ. ನಾಯಿ, ಸ್ಮೋಕ್…… ಎಂಬೆಲ್ಲ ಚರ್ಚೆ ನಡೆದಿದೆ.
ಇದಲ್ಲದೆ, ಮೂರನೇ ನಿಯಮವು “ಸಿಸಿ ಟಿವಿ ಕಣ್ಗಾವಲಿದೆ. ನಿಮ್ಮ ಅಮ್ಮ ಇಲ್ಲಿರುವಂತೆ ವರ್ತಿಸು” ಎಂದು ಇದೆ.
ಈ ನಿಯಮಗಳನ್ನು ನೋಡಿದ ನಂತರ ನೆಟ್ಟಿಗರು ಸಾಕಷ್ಟು ಆಶ್ಚರ್ಯ ಮತ್ತು ಗೊಂದಲಕ್ಕೊಳಗಾದರು ಎಂಬುದಕ್ಕೆ ಕಾಮೆಂಟ್ ವಿಭಾಗವೇ ಉದಾಹರಣೆಯಾಗಿದೆ.