ಸಾಂಕ್ರಾಮಿಕ ರೋಗ ಕೊರೊನಾ ಜಗತ್ತನ್ನು ಆವರಿಸಿದ ಬಳಿಕ ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ( ಮನೆಯಿಂದಲೇ ಕೆಲಸ ) ಅನ್ನು ಕೊಟ್ಟಿದೆ.
ಸುಮಾರು 18 ತಿಂಗಳಿನಿಂದ ಹಲವಾರು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಗೃಹಿಣಿಯೊಬ್ಬರು ಪತಿಯ ಬಾಸ್ ಗೆ ಪತ್ರ ಬರೆದಿದ್ದು, ಸದ್ಯ ಇದು ಭಾರಿ ವೈರಲ್ ಆಗಿದೆ.
ಉದ್ಯಮಿ ಹರ್ಷ ಗೋಯೆಂಕಾ ಅವರು ಈ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯರೇ, “ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ. ದಯವಿಟ್ಟು ನನ್ನ ಪತಿಗೆ ಆಫೀಸ್ ಇಂದ ಕೆಲಸ ಮಾಡುವುದನ್ನು ಪ್ರಾರಂಭಿಸಬೇಕಾಗಿ ವಿನಂತಿಸುತ್ತಿದ್ದೇನೆ. ಅವರು ಈಗಾಗಲೇ ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಹಾಗೂ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುತ್ತಾರೆ. ಇನ್ನೂ ಕೂಡ ಮನೆಯಿಂದಲೇ ಕೆಲಸ ಮುಂದುವರಿದರೆ, ನಮ್ಮ ಮದುವೆ ಖಂಡಿತವಾಗಿಯೂ ಕೆಲಸ ಮಾಡುವುದಿಲ್ಲ” ಎಂದು ಪತ್ರದಲ್ಲಿ ಬರೆದಿದ್ದಾರೆ.
BIG BREAKING: ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ
ಅಲ್ಲದೆ ದಿನದಲ್ಲಿ ತನ್ನ ಪತಿ ಕನಿಷ್ಠ 10 ಕಪ್ ಕಾಫಿ ಕುಡಿಯುತ್ತಾರೆ ಎಂದು ಪತ್ರದಲ್ಲಿ ನೊಂದ ಪತ್ನಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ ಬೇರೆ-ಬೇರೆ ಕೋಣೆಗಳಲ್ಲಿ ಕುಳಿತು ಅವ್ಯವಸ್ಥೆ ಮಾಡಿ ಬಿಡುತ್ತಾರೆ ಎಂದು ದೂರಿದ್ದಾರೆ. “ನಿರಂತರವಾಗಿ ಆಹಾರ ಕೇಳುತ್ತಿರುತ್ತಾರೆ. ನಾನು ಈಗಾಗಲೇ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಪತ್ರದ ಫೋಟೋ ವೈರಲ್ ಆಗಿದ್ದು, ಅನೇಕ ಮಹಿಳೆಯರು ಕಮೆಂಟ್ ಮಾಡಿದ್ದಾರೆ. ಕಳೆದ 18 ತಿಂಗಳಿನಿಂದ ತಮ್ಮ ಪರಿಸ್ಥಿತಿಯೂ ಇದೇ ರೀತಿ ಆಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.