ಈ ಸಲಿಂಗಿ ಜೋಡಿಯನ್ನು ಕಂಡ ಬಹುತೇಕ ಮಂದಿ ಅಮ್ಮ-ಮಗಳು ಎಂದುಕೊಂಡಿದ್ದಾರೆ. ವಿಟ್ನಿ ಬೇಕನ್-ಇವಾನ್ಸ್, (33 ವರ್ಷ) ಹಾಗೂ ಆಕೆಯ ಸಂಗಾತಿ ಮೆಗನ್ (34 ವರ್ಷ) ಜನರು ತಮ್ಮ ವಯಸ್ಸಿನ ಬಗ್ಗೆ ಪ್ರಶ್ನಿಸಿದಾಗೆಲ್ಲಾ ತಮಗೆ ಭಾರೀ ಕಿರಿಕಿರಿಯಾಗುತ್ತದೆ ಎಂದಿದ್ದಾರೆ.
ಇಂಗ್ಲೆಂಡ್‌ನ ಬರ್ಕ್‌ಶೈರ್‌ನ ವಿಂಡ್ಸರ್‌ನ ಈ ಜೋಡಿಯ ವಯಸ್ಸಿನ ಅಂತರ ಒಂದೇ ಒಂದು ವರ್ಷವಿದ್ದರೂ ಸಹ ಬಹಳಷ್ಟು ಬಾರಿ ಇಬ್ಬರೂ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ.
ಮುಖದಲ್ಲಿ ʼಮೊಡವೆʼ ಹೆಚ್ಚಾಗಲು ಈ ದುರಭ್ಯಾಸಗಳೇ ಕಾರಣ
2017ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದನ ಪಾಮ್ ಸ್ಪ್ರಿಂಗ್ಸ್‌ನಲ್ಲಿ ಮದುವೆಯಾದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.
ಥಟ್ಟಂತ ಮಾಡಿ ಟೇಸ್ಟಿ ವೆಜ್ ಫ್ರೈಡ್ ರೈಸ್
“ನಾನು 33 ವರ್ಷ ವಯಸ್ಸಿನ ಮಹಿಳೆ, ಹಾಗೂ ಮಹಿಳೆಯಂತೆ ಕಾಣಲು ಇಷ್ಟ ಪಡುತ್ತೇನೆ. ಒಂದು ತಿಂಗಳ ಹಿಂದೆ, ಡೆಲಿವರಿಯಾತ ಒಬ್ಬ ನನ್ನ ಮನೆ ಬಾಗಿಲನ್ನು ಬಡಿದು, ನನ್ನ ತಾಯಿ ಮನೆಯಲ್ಲಿಲ್ಲವೇ ಎಂದು ಕೇಳಿದ,” ಎಂದು ವಿಟ್ನಿ ಆನ್ಲೈನ್ ಪೋರ್ಟಲ್ ಒಂದರಲ್ಲಿ ಹೇಳಿಕೊಂಡಿದ್ದಾರೆ.
“ನನಗೆ ವಯಸ್ಸಾಗುತ್ತಿರುವುದು ಬೇಸರವೇನಿಲ್ಲ. ಆದರೆ ನಾನು ನನ್ನ ವಯಸ್ಸಿನವಳಂತೆ ಕಾಣಬೇಕು. ನಾನು 30ರ ವಯಸ್ಸಿನಲ್ಲಿರುವ ಯುವ ಮಹಿಳೆ. ಮಗುವಂತೆ ಕಾಣಲು ಇಷ್ಟವಿಲ್ಲ. ಈ ವಿಷಯದಲ್ಲಿ ಮೆಗನ್ ಬಗ್ಗೆ ನನಗೆ ಕಳಕಳಿ ಮೂಡುತ್ತದೆ. ಎಲ್ಲೋ ಒಂದು ಕಡೆ ಇದು ಆಕೆಗೆ ಬೇಸರ ತರುತ್ತಿದೆ. ನಾವಿಬ್ಬರೂ ಹೆಂಡತಿ ಮತ್ತು ಹೆಂಡತಿ ಎಂದು ಪದೇ ಪದೇ ಸ್ಪಷ್ಟನೆ ನೀಡುವುದು ಕಿರಿಕಿರಿಯಾಗುತ್ತಿದೆ. ನಾವು ಎಲ್ಲೇ ಹೋದರೂ ಹೀಗೆ ಆಗುತ್ತದೆ. ಕೆಲವೊಮ್ಮೆ ವಾರದಲ್ಲಿ ಐದು ಬಾರಿ ಹೀಗೆ ಆಗುತ್ತದೆ” ಎನ್ನುತ್ತಾರೆ ವಿಟ್ನಿ.