alex Certify ಕೀಲು ನೋವು ನಿವಾರಿಸುತ್ತೆ ಈ ಎಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೀಲು ನೋವು ನಿವಾರಿಸುತ್ತೆ ಈ ಎಲೆ

ಓಂಕಾಳು ಅಥವಾ ಓಮ ಅಡುಗೆ ಮನೆಗೆ ಅತ್ಯಂತ ಅಗತ್ಯವಾದ ಮಸಾಲೆ ಪದಾರ್ಥ. ಓಮದ ಎಲೆಗಳು ಕೂಡ ಔಷಧೀಯ ಗುಣಗಳನ್ನು ಹೊಂದಿವೆ. ಆರ್ಥರೈಟಿಸ್‌ ಕಾಯಿಲೆಗೆ ಇದು ಅತ್ಯಂತ ಪರಿಣಾಮಕಾರಿ ಔಷಧ ಅಂತಾ ಆಯುರ್ವೇದ ಪಂಡಿತರೇ ಹೇಳ್ತಿದ್ದಾರೆ.

ನಿಮಗೆ ಕೀಲು ನೋವಿದ್ದರೆ ಒಮ್ಮೆ ಓಮದ ಎಲೆಗಳನ್ನು ಬಳಸಿ ನೋಡಿ. ಬಹಳ ವರ್ಷಗಳಿಂದ ನಿಮಗೆ ನೋವಿನ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ನೋವು ಗುಣಪಡಿಸುವುದು ಮಾತ್ರವಲ್ಲದೆ ಇನ್ನೂ ಹಲವು ಔಷಧೀಯ ಗುಣಗಳನ್ನು ಇದು ಹೊಂದಿದೆ.

ಕೀಲು ನೋವು ಮಾತ್ರವಲ್ಲ ಸಕ್ಕರೆ ಕಾಯಿಲೆಗೂ ಇದು ರಾಮಬಾಣ. ದೇಶದಲ್ಲಿ ಲಕ್ಷಾಂತರ ಜನರು ಶುಗರ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಅವಶ್ಯವಾಗಿ ಓಮದ ಎಲೆಗಳನ್ನು ಸೇವನೆ ಮಾಡಬೇಕು. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಕೀಲು, ಸಂಧು ನೋವಿನಿಂದ ಬಳಲುತ್ತಿರುವವರು ಓಮದ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಆ ಬೆಚ್ಚಗಿನ ನೀರಿನಲ್ಲಿ ನೋವಿರುವ ಕಾಲುಗಳನ್ನು ಅದ್ದಿಕೊಂಡು 5-10 ನಿಮಿಷ ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ನೋವು ಉಪಶಮನವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...