ಛಲವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿಗಳು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತವೆ, ಇನ್ನೂ ಕೆಲವು ವೇಳೆಯಲ್ಲಿ ನಾವು ಬಯಸಿದ್ದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.
ಈ ಕೋವಿಡ್-19 ಎಂಬ ಮಹಾಮಾರಿ ಜಗತ್ತಿನಾದ್ಯಂತ ಅದೆಷ್ಟೋ ಕೋಟಿ ಜನರ ಜೀವನವನ್ನೇ ಕಿತ್ತುಕೊಂಡಿದೆ. ಇದ್ದ ಕೆಲಸಗಳನ್ನು ಕಿತ್ತುಕೊಂಡಿದೆ, ಕೆಲಸ ಸಿಗುವ ಅವಕಾಶಗಳ ಬಾಗಿಲನ್ನು ಮುಚ್ಚುವಂತೆ ಮಾಡಿದೆ, ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದೆ. ಹೀಗೆ ಹತ್ತಾರು ವಿಧದಲ್ಲಿ ಮನುಷ್ಯ ಜೀವನವನ್ನು ಹೈರಾಣಾಗುವಂತೆ ಮಾಡಿದೆ.
ಅದೇ ರೀತಿ ಕೊಲ್ಕತ್ತಾದ ಮೌತುಷಿ ಬಸು ಎಂಬ 30 ವರ್ಷದ ಹೆಣ್ಣು ಮಗಳ ಉದ್ಯೋಗವನ್ನೇ ಈ ಕೋವಿಡ್-19 ಸಾಂಕ್ರಾಮಿಕ ಕಿತ್ತುಕೊಂಡಿದೆ. ಪ್ಯಾನೋಸೋನಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೌತುಷಿ ಸಾಂಕ್ರಾಮಿಕದಿಂದ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು. ಕೆಲಸ ಹೋಯಿತೆಂದು ಕೈಕಟ್ಟಿ ಕುಳಿತರೆ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿತ್ತು.
ನಾಟಕೀಯ ಬೆಳವಣಿಗೆಗಳ ಮಧ್ಯೆ ತ್ರಿಪುರಾ ನೂತನ ಸಿಎಂ ಆಯ್ಕೆ
ಹೀಗಾಗಿ ಆಕೆ, ಹಿಂದೆ ಮುಂದೆ ಯೋಚಿಸದೇ ಉಬರ್ ಸಹಭಾಗಿತ್ವದಲ್ಲಿ ಬೈಕ್ ರೈಡರ್ ಆಗಿ ಕೆಲಸಕ್ಕೆ ಸೇರಿದರು. ಈ ಮಹಿಳೆಯ ಬಗ್ಗೆ ರಣಬೀರ್ ಭಟ್ಟಾಚಾರ್ಯ ಎಂಬುವರು ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ತುಂಬಾ ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.
ಮೌತುಷಿ ಅವರ ಫೋಟೋ ಸಹಿತ ಪೋಸ್ಟ್ ಮಾಡಿರುವ ಭಟ್ಟಾಚಾರ್ಯ ಅವರು, ಕೊಲ್ಕತ್ತಾ ನಗರದಲ್ಲಿ ಸುತ್ತಾಡಲು ನಾನು ಉಬರ್ ಮೋಟೋ ಬುಕ್ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಮೌತುಷಿಯವರು ತಮ್ಮ ದ್ವಿಚಕ್ರ ವಾಹನವನ್ನು ನಾನಿದ್ದ ಸ್ಥಳಕ್ಕೆ ತೆಗೆದುಕೊಂಡು ಬಂದರು. ಅವರೊಂದಿಗೆ ಸಾಗುತ್ತಾ ಬೈಕ್ ರೈಡರ್ ಆಗಿದ್ದರ ಬಗ್ಗೆ ವಿಚಾರಿಸಿದೆ. ಲಾಕ್ಡೌನ್ ಗೆ ಮುನ್ನ ಪ್ಯಾನಾಸೋನಿಕ್ ನಲ್ಲಿ ಕೆಲಸ ಮಾಡುತ್ತಿದ್ದೆ. ಕೋವಿಡ್ ನಿಂದ ಕೆಲಸ ಕಳೆದುಕೊಂಡೆ ಎಂದು ಹೇಳಿಕೊಂಡರು ಎಂದು ತಿಳಿಸಿದ್ದಾರೆ.
ತುಂತುರು ಮಳೆ ಹನಿಯುತ್ತಿದ್ದರೂ ನಾನು ತಲುಪಬೇಕಿದ್ದ ಸ್ಥಳಕ್ಕೆ ಬಿಟ್ಟ ಮೌತುಷಿ ಒಂದು ಪೈಸೆಯನ್ನೂ ಹೆಚ್ಚುವರಿಯಾಗಿ ತೆಗೆದುಕೊಳ್ಳಲಿಲ್ಲ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.