ಸದಾ ದಣಿವೆಂದು ಅನಿಸುತ್ತಿದ್ದರೆ ಬೀಟ್ ರೂಟ್ ರಸವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಎರಡು ಅಥವಾ ಮೂರು ದಿನಗಳಿಗೊಮ್ಮೆ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಸಾಕು, ಕೆಲವು ದಿನಗಳಲ್ಲಿ ಸಮಸ್ಯೆಯಿಂದ ಹೊರಬರಬಹುದು. ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಸಕ್ಕರೆ ಸಮಪಾಲಿನಲ್ಲಿ ದೊರೆತು ದಣಿವು ಹತ್ತಿರ ಸುಳಿಯದು. ಇದರಿಂದ ವಿಟಮಿನ್ ಬಿ, ಸಿ ಹೇರಳವಾಗಿ ಸಿಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಹಾಗಲಕಾಯಿ
ಇದರ ಹೆಸರು ಹೇಳಿದರೆ ಸಾಕು ಕಹಿಯೆಂದು ದೂರ ಹೋಗುವವರೇ ಹೆಚ್ಚು. ಆದರೆ ಇದು ಮಾಡುವ ಒಳಿತು ತುಂಬಾ ಹೆಚ್ಚು. ಇದರಲ್ಲಿ ಸಕ್ಕರೆ ಇರದು. ಆದ್ದರಿಂದ ಮಧುಮೇಹಿಗಳಿಗೆ ಹಾಗಲಕಾಯಿ ಜ್ಯೂಸ್ ತುಂಬಾ ಒಳ್ಳೆಯದು.
ಕಲ್ಲಂಗಡಿ
ಪ್ರತಿದಿನ ಮನುಷ್ಯರಿಗೆ ಅಗತ್ಯವಾದ ಖನಿಜಗಳು ಇತರ ಪೋಷಕಾಂಶಗಳು, ಉಪ್ಪು ಒಂದು ಗ್ಲಾಸ್ ಕಲ್ಲಂಗಡಿ ರಸದಿಂದ ,ದೊರೆಯುತ್ತದೆ. ಡಿಹೈಡ್ರೇಷನ್ ಸಮಸ್ಯೆ ಬರದಂತೆ ಕಾಪಾಡುತ್ತದೆ. ಅದು ದೇಹದಲ್ಲಿರುವ ವ್ಯರ್ಥಗಳನ್ನು ಹೊರಗೆ ಕಳುಹಿಸುತ್ತದೆ. ಇದನ್ನು ಎಷ್ಟು ಕುಡಿದರೂ ಸಹ ತೂಕ ಹೆಚ್ಚಾಗುವುದಿಲ್ಲ.
ಕ್ಯಾರೆಟ್
ವಿಟಮಿನ್ ಎ ಹೇರಳವಾಗಿರುವ ತರಕಾರಿ ಇದಾಗಿದೆ. ಚರ್ಮದ ಸಮಸ್ಯೆಗಳು, ಕಣ್ಣಿನ ಸಮಸ್ಯೆ ಇರುವವರು ಕ್ಯಾರೆಟ್ ರಸವನ್ನು ಸೇವಿಸಿದರೆ ಉಪಶಮನ ದೊರೆಯುತ್ತದೆ. ಪ್ರತಿದಿನ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿದರೆ ಚರ್ಮ ಪಳಪಳನೆ ಹೊಳೆಯುತ್ತದೆ.