ಇದರಲ್ಲಿ ಶಕ್ತಿ ಭರಿತ ಆಂಟಿಆಕ್ಸಿಡೆಂಟ್ ಗಳು ಇರುತ್ತವೆ. ದೇಹದಲ್ಲಿ ಆರೋಗ್ಯವಾಗಿರುವ ಕಣಗಳ ಮೇಲೆ ದಾಳಿ ಮಾಡುವ ಸ್ವತಂತ್ರ ಕಾಯಗಳನ್ನು ಈ ಆಂಟಿಆಕ್ಸಿಡೆಂಟ್ ನಾಶಪಡಿಸುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಜೈವಿಕ ಕ್ರಿಯೆಗಳ ವೇಗ ಸಹ ಹೆಚ್ಚುತ್ತದೆ. ಗ್ರೀನ್ ಟೀ ಕೊಬ್ಬನ್ನು ಕರಗಿಸುತ್ತದೆ.
ನಿಂಬೆಹಣ್ಣು
ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿ ನೀಡುತ್ತದೆ. ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ನೆಗಡಿಯನ್ನು ಸಹ ನಿಯಂತ್ರಣದಲ್ಲಿಡುವಂತಹ ಶಕ್ತಿ ನಿಂಬೆ ಹಣ್ಣಿಗಿದೆ. ನಿಂಬೆರಸ ದೇಹದಲ್ಲಿರುವ ವ್ಯರ್ಥಗಳನ್ನು ಹೊರಗೆ ಕಳುಹಿಸುತ್ತದೆ. ಚರ್ಮದ ಮೇಲೆ ಮಚ್ಚೆಗಳು ಬರದಂತೆ ಮಾಡುತ್ತದೆ. ಹೀಗಾಗಿ ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿಗೆ ಅರ್ಧ ಹೋಳು ನಿಂಬೆ ರಸ ಬೆರೆಸಿ ಕುಡಿಯಿರಿ. ನಿಂಬೆ ರಸದಲ್ಲಿ ಆದಷ್ಟು ಸಕ್ಕರೆ ಬೆರೆಸದೆ ಇರುವುದಕ್ಕೆ ಪ್ರಾಮುಖ್ಯತೆ ಕೊಡಿ.
ಬೀಟ್ ರೂಟ್
ಬೀಟ್ ರೂಟ್ ಸೇವನೆಯಿಂದ ಪಿತ್ತಜನಕಾಂಗದ ಕಾರ್ಯವೈಖರಿ ಕ್ರಮಬದ್ಧವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ವ್ಯರ್ಥಗಳನ್ನು ಹೊರಗೆ ಕಳುಹಿಸಲು ಸಹಕಾರಿ. ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅರ್ಧ ಗ್ಲಾಸ್ ಪ್ರಮಾಣದಲ್ಲಿ ಬೀಟ್ ರೂಟ್ ರಸವನ್ನು ಸೇವಿಸಬೇಕು. ಇದರಲ್ಲಿ ಕೊತ್ತಂಬರಿ, ಸೌತೆಕಾಯಿ, ನಿಂಬೆರಸ, ಸೇಬು ಅಥವಾ ಶುಂಠಿ ಅಂತಹವುಗಳನ್ನು ಸೇರ್ಪಡೆ ಮಾಡಿಕೊಂಡರೆ ಹೆಚ್ಚು ಪ್ರಯೋಜನ ಹೊಂದಬಹುದು. ಇದರ ಸೇವನೆಯಿಂದ ವ್ಯರ್ಥಗಳು ಹೊರಗೆ ಹೋಗಿ ಪೋಷಕಾಂಶಗಳು ದೇಹದೊಳಗೆ ಸೇರ್ಪಡೆಯಾಗುತ್ತದೆ.
ತಾಜಾ ಹಣ್ಣುಗಳು
ದೇಹದಲ್ಲಿರುವ ವ್ಯರ್ಥ ಗಳು ದೂರವಾಗ ಬೇಕೆಂದರೆ ತಂಪಾದ ಪಾನೀಯಗಳಿಗಿಂತ ಇವುಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಒಂದೆಡೆ ಅವನ್ನು ತಿನ್ನುತ್ತಾ ನೀರನ್ನು ಹೇರಳವಾಗಿ ಕುಡಿಯಬೇಕು. ತಿನ್ನುವುದು ಕಿರಿಕಿರಿ ಎನಿಸಿದರೆ ಎಲ್ಲವನ್ನೂ ಬೆರೆಸಿ ಸಲಾಡ್ ರೂಪದಲ್ಲಿ ಸೇವಿಸಬಹುದು.
ಬಾದಾಮಿ
ಇದರಲ್ಲಿ ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ನಾರಿನಂಶಗಳು ಇರುತ್ತವೆ. ಈ ಪೋಷಕಾಂಶಗಳೆಲ್ಲವೂ ಜೈವಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸುವುದಲ್ಲದೆ, ವ್ಯರ್ಥ ಗಳು ಸುಲಭವಾಗಿ ಹೋಗುವಂತೆ ಮಾಡುತ್ತದೆ. ಅಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.