ಹೆಚ್ಚಿನವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಈ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಅಡುಗೆಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.
*ಕಪ್ಪು ಮೆಣಸು: ಇದರಲ್ಲಿರುವ ಅಂಶ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆಯಂತೆ. ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆಯಂತೆ.
*ಶುಂಠಿ: ಇದು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಕಾರಿಯಾಗಿದೆಯಂತೆ.
*ಜೀರಿಗೆ: ಇದರಲ್ಲಿರುವ ಅಂಶ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳು ಬೆಳೆಯದಂತೆ ತಡೆಯುತ್ತದೆಯಂತೆ.
*ದಾಲ್ಚಿನ್ನಿ: ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದು, ಗಡ್ಡೆಯ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾದೆ.