alex Certify ಯುರೋಪ್‌ ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗ್ತಿದೆ ಅಡುಗೆ ಮನೆಯಲ್ಲಿರುವ ಈ ವಸ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುರೋಪ್‌ ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗ್ತಿದೆ ಅಡುಗೆ ಮನೆಯಲ್ಲಿರುವ ಈ ವಸ್ತು…!

ಆಹಾರ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಉಪ್ಪು, ಹುಳಿ, ಸಿಹಿ ಹೀಗೆ ಯಾವುದೇ ವಸ್ತುಗಳ ಸೇವನೆ ಅತಿಯಾದರೂ ಅದು ಅಪಾಯಕಾರಿಯೇ. ಇದರಿಂದ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಮಿತಿಮೀರಿದ ಪ್ರಮಾಣದಲ್ಲಿ ಸೇವಿಸಿದರೆ ಸಾವಿಗೆ ಕಾರಣವಾಗುವ ಅನೇಕ ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇವೆ.

WHO ಇತ್ತೀಚೆಗೆ ವರದಿಯೊಂದರಲ್ಲಿ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿದೆ. ಯುರೋಪ್‌ನಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಂತೆ. ಹೃದಯಾಘಾತದಿಂದ ವರ್ಷಕ್ಕೆ 4 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅತಿಯಾಗಿ ಉಪ್ಪು ತಿನ್ನುವುದು. ವಿಪರೀತ ಉಪ್ಪು ತಿಂದರೆ ಹೃದಯಾಘಾತಕ್ಕೆ ಕಾರಣವಾಗುವ ಬಿಪಿ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ.

ಸಾವಿಗೆ ಕಾರಣವಾಗುತ್ತದೆ ಅತಿಯಾದ ಉಪ್ಪು ಸೇವನೆ !

WHO ವರದಿಯ ಪ್ರಕಾರ ಯುರೋಪ್‌ನಲ್ಲಿ ಹೆಚ್ಚಿನ ಜನರು ಮಿತಿಮೀರಿ ಉಪ್ಪು ಸೇವಿಸುತ್ತಾರೆ. ಹಾಗಾಗಿ ಬಿಪಿ ಮತ್ತು ಹೃದಯಾಘಾತದ ಸಮಸ್ಯೆ ಹೆಚ್ಚು. ಇದರಿಂದ ಪಾರ್ಶ್ವವಾಯು ಬರುವ ಅಪಾಯವಿದೆ. ಉಪ್ಪನ್ನು ಕಡಿಮೆ ಸೇವನೆ ಮಾಡುವಂತೆ ಯುರೋಪ್‌ನ ನಾಗರಿಕರಿಗೆ WHO ಮನವಿ ಮಾಡಿದೆ.

ಹೆಚ್ಚು ಉಪ್ಪು ಏಕೆ ಅಪಾಯಕಾರಿ ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವಾಗಿರಲು ಪ್ರತಿದಿನ ಗರಿಷ್ಠ 5 ಗ್ರಾಂ ಉಪ್ಪನ್ನು ತಿನ್ನಬಹುದು. ಅಂದರೆ ದಿನಕ್ಕೆ ಸುಮಾರು 1 ಚಮಚ ಉಪ್ಪನ್ನು ತಿನ್ನಬಹುದು. ಆದರೆ ಯುರೋಪಿನ ಎಲ್ಲಾ ದೇಶಗಳಲ್ಲಿ ಜನರು ಈ ಮಾನದಂಡಕ್ಕಿಂತ ಹೆಚ್ಚು ಉಪ್ಪನ್ನು ತಿನ್ನುತ್ತಾರೆ. ಇದರಿಂದಾಗಿ ಅವರು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಉಪ್ಪು ಸೇವನೆಯನ್ನು ಕಡಿಮೆ ಮಾಡಿದರೆ ಈ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಉಪ್ಪನ್ನು ಸ್ಟ್ರೀಟ್‌ ಫುಡ್‌ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇವುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಆಹಾರದಲ್ಲಿನ ಉಪ್ಪಿನ ಪ್ರಮಾಣವನ್ನು ಶೇ.25ರಷ್ಟು ಕಡಿಮೆ ಮಾಡಿದರೆ 2030ರ ವೇಳೆಗೆ ಕನಿಷ್ಠ 9 ಲಕ್ಷ ಜನರ ಜೀವ ಉಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...