ನೀವು ಜಿಮ್ ಗೆ ಹೋಗುತ್ತೀರಾ? ಹಾಗೆ ಹೋಗುವಾಗ ಒಳಉಡುಪುಗಳನ್ನು ಧರಿಸುತ್ತೀರಾ? ಕಡ್ಡಾಯವಾಗಿ ಕಾಟನ್ ಒಳ ಉಡುಪುಗಳನ್ನೇ ಖರೀದಿಸಿ ಮತ್ತು ಧರಿಸಿ. ಏಕೆಂದರೆ…
ಗುಪ್ತ ಭಾಗಗಳಲ್ಲಿ ಬೆವರು ನಿಲ್ಲುವುದರಿಂದ ಅಲ್ಲಿ ದದ್ದು ಅಥವಾ ಅಲರ್ಜಿಯ ಲಕ್ಷಣಗಳು ಕಂಡು ಬಂದಾವು. ಮಹಿಳೆಯರು ಸ್ಪೋರ್ಟ್ಸ್ ಬ್ರಾ ಧರಿಸುವುದು ಬಹಳ ಮುಖ್ಯ. ಇದು ಹೆಚ್ಚಿನ ಬೌನ್ಸ್ ಅನ್ನು ತಡೆಯುತ್ತದೆ. ಯಾವುದೇ ಭಾಗಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.
ಒಳ ಉಡುಪುಗಳು ತುಂಬಾ ಟೈಟ್ ಇದ್ದರೆ ಅದನ್ನು ಧರಿಸುವುದು ಬೇಡ. ಸೂಕ್ಷ್ಮ ಪ್ರದೇಶಗಳಲ್ಲಿ ತೇವಾಂಶ ನಿಲ್ಲದಂತೆ ನೋಡಿಕೊಳ್ಳುವ ಉಡುಪನ್ನೇ ಧರಿಸಿ.
ಯೋಗ, ರನ್ನಿಂಗ್ ಹಾಗೂ ವರ್ಕೌಟ್ ಮಾಡಲೆಂದೇ ವಿಶೇಷ ಒಳ ಉಡುಪುಗಳು ಲಭ್ಯವಿವೆ. ಅವು ದೇಹದ ಭಾಗಗಳಿಗೆ ಉಸಿರಾಡಲು ಅವಕಾಶ ನೀಡುವಂತಿರುತ್ತದೆ. ಪುರುಷರೂ ಅಷ್ಟೇ ದೇಹಕ್ಕೆ ಹೊಂದಿಕೊಳ್ಳುವ, ಆರಾಮದಾಯಕ ಉಡುಪನ್ನು ಧರಿಸುವುದು ಬಹಳ ಮುಖ್ಯ.