
ಸಾಕು ಪ್ರಾಣಿಗಳನ್ನು ಸಾಕಲು ಬಹುತೇಕರು ಇಷ್ಟ ಪಡುತ್ತಾರೆ. ಒಮ್ಮೆ ಯಾವುದೇ ಸಾಕುಪ್ರಾಣಿಯನ್ನು ಸಾಕಿದರೆ ಸಾಕು ಅವು ನಮ್ಮ ಹೃದಯಕ್ಕೆ ಹತ್ತಿರವಾಗಿಬಿಡುತ್ತದೆ. ಬೆಕ್ಕನ್ನು ಅಷ್ಟು ಇಷ್ಟಪಡದ ವ್ಯಕ್ತಿಯೊಬ್ಬರು ಸದ್ಯ ಅದನ್ನು ಬಿಟ್ಟಿರಲಾರದಷ್ಟು ಮನಃಸ್ಥಿತಿಗೆ ತಲುಪಿದ್ದಾರೆ.
ಹೌದು, ಸದ್ಯ ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ತನ್ನ ಬೆಕ್ಕನ್ನು ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದಾರೆ. ಅದು ಕೂಡ ಮನೆಯ ಸಾಮಾನ್ಯ ಸದಸ್ಯನಂತೆ ಮನೆಯವರಿಗೆ ಹೊಂದಿಕೊಂಡಿದೆ. ಇದು ಮನುಷ್ಯ ಮತ್ತು ಬೆಕ್ಕಿನ ನಡುವಿನ ಮುದ್ದಾದ ಮುಗ್ಧ ಬಾಂಧವ್ಯವನ್ನು ತೋರಿಸುತ್ತದೆ. ಮಂಚದ ಮೇಲೆ ಕುಳಿತು ಟಿವಿ ವೀಕ್ಷಿಸುತ್ತಿರುವಾಗ ಇಬ್ಬರೂ ಪರಸ್ಪರರ ಕಂಪನಿಯನ್ನು ಆನಂದಿಸುತ್ತಿರುವುದು ದೃಶ್ಯದಲ್ಲಿ ಕಾಣಬಹುದು. ಇದೊಂಥರಾ ಬೆಕ್ಕು ಮನುಷ್ಯನನ್ನೇ ದತ್ತು ಪಡೆದಿದೆಯೋ ಏನೋ ಎಂದೆನಿಸಿಬಿಡುತ್ತದೆ.
ಶಬರಿಮಲೆಯಾತ್ರೆ ಸಂಬಂಧ ಮಹತ್ವದ ಆದೇಶ ಪ್ರಕಟಿಸಿದ ಕೇರಳ ಹೈಕೋರ್ಟ್
ಈ ವಿಡಿಯೋ ಕ್ಲಿಪ್ ಅನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದು, ಅವರ ಜೀವನದಲ್ಲಿ ಪ್ರಾಣಿಗಳ ಬಗ್ಗೆ ಆರಂಭದಲ್ಲಿ ತುಂಬಾ ಭಯಪಡುತ್ತಿದ್ದರಂತೆ. ಆದರೆ ಈಗ ಬೆಕ್ಕನ್ನು ಬಹಳ ಮುದ್ದಿನಿಂದ ಸಾಕುತ್ತಿದ್ದು, ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯವಿಲ್ಲ ಅನ್ನೋ ತರಹ ಆಗಿದ್ಯಂತೆ.