ಉದಯಪುರ ಸರೋವರಗಳ ನಗರ ಎಂದೇ ಪ್ರಸಿದ್ಧಿ. ಈ ನಗರವು ನೈಸರ್ಗಿಕ ಸೌಂದರ್ಯದ ಪ್ರತೀಕವಾಗಿದೆ. ಸರೋವರಗಳು ಮತ್ತು ಬೆಟ್ಟಗಳೇ ಇಲ್ಲಿನ ಆಕರ್ಷಣೆ. ಹಾಗಾಗಿ ಉದಯಪುರ, ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿನ ಸಿಟಿ ಪ್ಯಾಲೇಸ್‌ಗೆ ಒಮ್ಮೆಯಾದರೂ ವಿಸಿಟ್ ಮಾಡಲೇಬೇಕು. ಇಲ್ಲಿ ಮ್ಯೂಸಿಯಂ ಕೂಡ ಇದೆ.
ಇದು ಅತ್ಯಂತ ಭವ್ಯವಾದ ಅರಮನೆ. ನಗರದ ಅನೇಕ ಅರಮನೆಗಳು ಕಾಲಾನಂತರದಲ್ಲಿ ಐಷಾರಾಮಿ ಹೋಟೆಲ್‌ಗಳಾಗಿ ಪರಿವರ್ತನೆಗೊಂಡಿವೆ. ಸೆಲೆಬ್ರಿಟಿಗಳು ಮತ್ತು ಪ್ರಮುಖ ವ್ಯಕ್ತಿಗಳಿಗೆ ಡೆಸ್ಟಿನೇಶನ್ ವೆಡ್ಡಿಂಗ್‌ನ ತಾಣಗಳಾಗಿವೆ.
ವಿಶೇಷ ಸಂದರ್ಭಗಳನ್ನು ಆಚರಿಸಲು ಅನೇಕರು ಅರಮನೆಗಳ ಕೊಠಡಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಸಿಟಿ ಪ್ಯಾಲೇಸ್ ಬಳಿಯ ಹೋಟೆಲ್‌ನಲ್ಲಿ ತಂಗಲು ಲಕ್ಷ ಲಕ್ಷ ಖರ್ಚು ಮಾಡಬೇಕು. ಈ ಹೋಟೆಲ್‌ಗಳಲ್ಲಿ ಐಷಾರಾಮಿ ಕೊಠಡಿಗಳಿಗೆ ಒಂದು ರಾತ್ರಿಯ ಬಾಡಿಗೆ 7 ಲಕ್ಷ ರೂಪಾಯಿ ಇದೆ. ಏಕೆಂದರೆ ಉದಯಪುರದ ಸಿಟಿ ಪ್ಯಾಲೇಸ್ ಅನ್ನು ಭಾರತದ ಎರಡನೇ ಅತಿದೊಡ್ಡ ಅರಮನೆ ಎಂದು ಪರಿಗಣಿಸಲಾಗಿದೆ.
ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಕೊಠಡಿಯ ಬಾಡಿಗೆ ದುಬಾರಿಯಾಗಿದೆ. ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಕೊಂಚ ಅಗ್ಗದ ಬೆಲೆಗೆ ಸಿಗಬಹುದು. ಉದಯಪುರದಲ್ಲಿ ಕೆಲವು ಕಡಿಮೆ ಬೆಲೆಯ ಹೋಟೆಲ್‌ಗಳು ಇವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದೆಂದರೆ ತಾಜ್ ಫತೇಹ್ ಪ್ರಕಾಶ್ ಪ್ಯಾಲೇಸ್.
ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಸುಮಾರು 17,000 ರೂಪಾಯಿ ವೆಚ್ಚ ಮಾಡಬೇಕು. ಈ ಹೋಟೆಲ್ ಸಿಟಿ ಪ್ಯಾಲೇಸ್‌ನಿಂದ ಕೇವಲ 160 ಮೀಟರ್ ದೂರದಲ್ಲಿದೆ. ಮತ್ತೊಂದು ಫೇಮಸ್ ಹೋಟೆಲ್ ತಾಜ್ ಲೇಕ್ ಪ್ಯಾಲೇಸ್ ಅನ್ನು ಕೂಡ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಬಹುದು. ಲೇಕ್ ರೆಸಾರ್ಟ್, ಲೀಲಾ ಪ್ಯಾಲೇಸ್ ಜೈಪುರದಂತಹ ಐಷಾರಾಮಿ ಹೋಟೆಲ್‌ಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.