ಬಾಲ್ಯದಿಂದಲೂ ಬಾದಾಮಿ ತಿಂದರೆ ಒಳ್ಳೆಯದು ಎಂಬ ಮಾತನ್ನ ಕೇಳಿರ್ತೇವೆ. ನೆನೆಸಿದ ಬಾದಾಮಿಯನ್ನ ತಿನ್ನೋದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಇದು ಮಾತ್ರವಲ್ಲದೇ ಇನ್ನೂ ಅನೇಕ ಲಾಭಗಳಿದೆ. ಇದು ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತೆ. ದೇಹದಲ್ಲಿ ಉತ್ತಮ ಕೊಬ್ಬು ಶೇಖರಣೆಯಾಗುತ್ತೆ. ಬಾದಾಮಿ ಸೇವನೆಯಿಂದ ಹತ್ತು ಹಲವು ಲಾಭವಿದೆ ಅನ್ನೋದು ನಿಜ. ಆದರೆ ಅನೇಕರಿಗೆ ಇದನ್ನ ಸೇವಿಸುವ ಸರಿಯಾದ ವಿಧಾನವೇ ತಿಳಿದಿಲ್ಲ.
ಬಾದಾಮಿ ಸಿಪ್ಪೆಯನ್ನ ತೆಗದು ಬಳಿಕ ಸೇವನೆ ಮಾಡಬೇಕು. ಆದರೆ ಅನೇಕರು ತರಾತುರಿಯಲ್ಲಿ ಸಿಪ್ಪೆ ಸಮೇತ ಬಾದಾಮಿಯನ್ನ ಸೇವಿಸಿಬಿಡ್ತಾರೆ. ಇದರಿಂದ ನಿಮ್ಮ ದೇಹಕ್ಕೆ ಬಾದಾಮಿಯ ಸಂಪೂರ್ಣ ಲಾಭ ದಕ್ಕೋದಿಲ್ಲ. ಬಾದಾಮಿ ಸಿಪ್ಪೆಯನ್ನ ಜೀರ್ಣ ಮಾಡಿಕೊಳ್ಳೋದು ತುಂಬಾನೇ ಕಷ್ಟ. ಬಾದಾಮಿಯ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಎಂಜೈಮ್ ಇರುತ್ತೆ. ಇದರಿಂದಾಗಿ ದೇಹಕ್ಕೆ ಬಾದಾಮಿಯ ಸಂಪೂರ್ಣ ಪೋಷಕಾಂಶ ಸಿಗೋದಿಲ್ಲ. ಹೀಗಾಗಿ ಬಾದಾಮಿ ಸಿಪ್ಪೆಯನ್ನ ತೆಗದು ಸೇವಿಸುವ ಅಭ್ಯಾಸವನ್ನ ರೂಢಿಸಿಕೊಳ್ಳಿ.
ಬಾದಾಮಿ ಸಿಪ್ಪೆಯ ಸೇವನೆಯಿಂದ ಎಷ್ಟು ನಷ್ಟವಿದೆಯೋ ಅದರ ಜೊತೆಯಲ್ಲಿ ನೆನೆಸಿ ತಿನ್ನೋದು ಕೂಡ ತುಂಬಾನೆ ಒಳ್ಳೆಯದು. ನೆನೆಸಿದ ಬಾದಾಮಿಯ ಸೇವನೆಯಿಂದ ದೇಹದಲ್ಲಿ ಫೈಟಿಕ್ ಆಸಿಡ್ ಅಂಶ ಕಡಿಮೆಯಾಗಲಿದೆ. ದೇಹದಲ್ಲಿ ಫೈಟಿಕ್ ಆಸಿಡ್ ಹೆಚ್ಚಾಗಿದ್ರೆ ಕ್ಯಾಲ್ಶಿಯಂ, ಝಿಂಕ್ ಹಾಗೂ ಮ್ಯಾಂಗನೀಸ್ ಕೊರತೆ ಉಂಟಾಗುತ್ತೆ. ಹೀಗಾಗಿ ಬಾದಾಮಿಯನ್ನ ನೆನೆಸಿಟ್ಟು ತಿನ್ನೋದು ತುಂಬಾನೇ ಒಳ್ಳೆಯದು. ಬಾದಾಮಿಯಲ್ಲಿ ಮ್ಯಾಗ್ನೀಷಿಯಂ ಅಂಶ ಅಗಾಧಪ್ರಮಾಣದಲ್ಲಿ ಇರೋದ್ರಿಂದ ಟೈಪ್ 2 ಡಯಾಬಿಟೀಸ್ ಇರುವವರಿಗೆ ತುಂಬಾನೇ ಒಳ್ಳೆಯದು. ಬಾದಾಮಿ ಸೇವನೆಯಿಂದ ಹೃದಾಯಾಘಾತದ ಅಪಾಯವೂ ದೂರವಾಗುತ್ತೆ.