ಪಾಕಿಸ್ತಾನ ಕಳೆದ ಹಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಕೆಟ್ಟ ಆಡಳಿತದ ಪರಿಣಾಮವೂ ಇರಬಹುದು. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯಿಂದ ಹಿಡಿದು ಪೆಟ್ರೋಲ್‌ವರೆಗೆ ಎಲ್ಲವೂ ದುಬಾರಿಯಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಅನೇಕ ಸಿರಿವಂತರು ಸಹ ಇದ್ದಾರೆ. ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆಯ ಹೆಸರು ಸಂಗೀತಾ ಪರ್ವೀನ್ ರಿಜ್ವಿ.
ದೇಶ ವಿಭಜನೆಗೂ ಮುನ್ನ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಜನಿಸಿದ ಸಂಗೀತಾ, ಪರ್ವೀನ್ ರಿಜ್ವಿ ಎಂದೇ ಖ್ಯಾತಿ ಪಡೆದಿರುವ ನಟಿ. ಪಾಕಿಸ್ತಾನಿ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಹೆಸರು ಗಳಿಸಿದ್ದಾರೆ.
ಸಂಗೀತಾ 1967 ರಲ್ಲಿ ಬಿಡುಗಡೆಯಾದ ‘ಕೋಹ್-ಎ-ನೂರ್’ ಚಿತ್ರದ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ರು. 45 ವರ್ಷಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ನಿಕಾಹ್’, ‘ಮುಟ್ಟಿ ಭರ್ ಚಾವಲ್’, ‘ಯೇ ಅಮಾನ್’ ಮತ್ತು ‘ನಾಮ್ ಮೇರಾ ಬದ್ನಾಮ್’ ನಂತಹ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅದ್ಭುತ ನಟನೆ ಮಾಡಿದ್ದಾರೆ. ಸಂಗೀತಾ ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದಾಗಿಯೇ ಪಾಕ್ ಚಲನಚಿತ್ರೋದ್ಯಮದಲ್ಲಿ ಗುರುತಿಸಿಕೊಂಡವರು. ದೇಶದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಂಗೀತಾ ಅವರ ಯಶೋಗಾಥೆ ಪಾಕಿಸ್ತಾನೀಯರಿಗೆ ಸ್ಪೂರ್ತಿಯಾಗುವಂತಿದೆ.
ಸಂಗೀತಾರ ವಾರ್ಷಿಕ ಗಳಿಕೆ ಸುಮಾರು 39 ಕೋಟಿ ರೂಪಾಯಿ. ಪಾಕಿಸ್ತಾನದಂತಹ ದೇಶದಲ್ಲಿ ಹೆಸರು ಹಾಗೂ ಸಂಪತ್ತು ಎರಡನ್ನೂ ಗಳಿಸಿದ್ದಾರೆ ಸಂಗೀತಾ. ಈ ಮೂಲಕ ಪಾಕ್‌ನ ಅತ್ಯಂತ ಶ್ರೀಮಂತ ಹಿಂದೂ ಮಹಿಳೆ ಎನಿಸಿಕೊಂಡಿದ್ದಾರೆ.