ಅಸಂಖ್ಯಾತ ರಾಮಭಕ್ತರ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ.
ಇದರ ಮಧ್ಯೆ ಜನವರಿ 22 ರ ಮಧ್ಯಾಹ್ನ 12.20 ಕ್ಕೇ ಈ ಕಾರ್ಯಕ್ರಮ ನಿಗದಿಯಾಗಿದ್ದು ಏಕೆ ಎಂಬ ಕುತೂಹಲದ ಪ್ರಶ್ನೆ ಹಲವರಿಂದ ಕೇಳಿ ಬಂದಿದ್ದು, ಇದೀಗ ಅದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಮಹಂತ ಗೋವಿಂದ್ ದೇವ್ ಗಿರಿ ಸ್ಪಷ್ಟನೆ ನೀಡಿದ್ದಾರೆ.
ಹಿಂದೂ ಪಂಚಾಂಗದಂತೆ ಜನವರಿ 22ರ ಸೋಮವಾರದಂದು ‘ಅಮೃತ ಸಿದ್ಧಿ ಯೋಗ ಮತ್ತು ಸರ್ವತ್ರ ಸಿದ್ದಿ ಯೋಗ’ ಮುಹೂರ್ತವಿದ್ದು, ಹೀಗಾಗಿ ಕಾಶಿಯ ಪಾರಂಪರಿಕ ವಿದ್ವಾಂಸರು ಹಾಗೂ ಜ್ಯೋತಿಷಿಗಳು ಹವನ ನಡೆಸಲು ಈ ಮುಹೂರ್ತ ಹೆಚ್ಚು ಸೂಕ್ತ ಎಂದು ತಿಳಿಸಿದ್ದಾರೆ. ಇದರಿಂದ ದೇಶದ ಕಲ್ಯಾಣಕ್ಕೂ ಅನುಕೂಲವಾಗಲಿದ್ದು, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಹಾಂತಾ ಗೋವಿಂದ್ ದೇವ್ ಗಿರಿ ಹೇಳಿದ್ದಾರೆ.