ಡೇಟಿಂಗ್ ಈಗ ಒಂದು ಟ್ರೆಂಡ್. ಮೋಜು-ಮಸ್ತಿಗಾಗಿ ಕೆಲವರು ಡೇಟಿಂಗ್ ಗೆ ಹೋದ್ರೆ ಮತ್ತೆ ಕೆಲವರು ಟೈಂ ಪಾಸ್ ಮಾಡಲು ಹೋಗ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಡೇಟಿಂಗ್ ಗೆ ಹೋಗ್ತಾರೆ. ಕೆಲವೊಮ್ಮೆ ಡೇಟಿಂಗ್ ಗೆ ಹೋಗಲು ಇಷ್ಟವಿರೋದಿಲ್ಲ. ಆದ್ರೆ ಹೇಗೆ ತಪ್ಪಿಸಿಕೊಳ್ಳೋದು ಎಂಬ ಚಿಂತೆ ಅನೇಕರನ್ನು ಕಾಡುತ್ತದೆ.
ಇಂಟರ್ನೆಟ್ ನಲ್ಲಿ ಸದಾ ಚಾಟ್ ಮಾಡುವ ಸ್ನೇಹಿತರು ಏಕಾಏಕಿ ಡೇಟಿಂಗ್ ಆಫರ್ ನೀಡ್ತಾರೆ. ಅವ್ರ ಮನಸ್ಸು ನೋಯಿಸಲು ಮನಸ್ಸಿರೋದಿಲ್ಲ. ಹಾಗಂತ ಡೇಟಿಂಗ್ ಗೆ ಹೋಗಲು ಇಷ್ಟವಿರೋಲ್ಲ. ಅಂಥ ಸಂದರ್ಭದಲ್ಲಿ ಇಂಥ ಉಪಾಯಗಳನ್ನು ಬಳಸಬಹುದು.
ಅವರ ಬಳಿ ಮನೆಗೆ ಸ್ನೇಹಿತರು ಅಥವಾ ಸಂಬಂಧಿಕರು ಬಂದಿದ್ದಾರೆಂದು ಸುಳ್ಳು ಹೇಳಿ.
ಇಂದು ಮನಸ್ಸು ಸರಿಯಿಲ್ಲ. ಹಾಗಾಗಿ ಬರಲು ಸಾಧ್ಯವಿಲ್ಲ ಎನ್ನಬಹುದು.
ಜಾಬ್ ಗೆ ಕಾಲ್ ಲೆಟರ್ ಬಂದಿದೆ. ಸಂದರ್ಶನಕ್ಕೆ ಸಿದ್ಧತೆ ನಡೆಸಬೇಕು. ಹಾಗಾಗಿ ಈಗ ಬರಲು ಸಾಧ್ಯವಿಲ್ಲ ಎಂದು ಹೇಳಿ.
ಕಾಲೇಜಿಗೆ ಹೋಗುವವರಾದ್ರೆ ಪರೀಕ್ಷೆ ಹತ್ರ ಬಂತು ಎನ್ನಬಹುದು.
ಬೇಸರ ಮಾಡಿಕೊಳ್ಳಬೇಡಿ. ಸಮಯ ಸಿಕ್ಕಾಗ ಅಗತ್ಯವಾಗಿ ಬರುತ್ತೇನೆ ಎಂದು ಭರವಸೆ ನೀಡಿ.
ಕೆಲಸದಲ್ಲಿ ಬ್ಯುಸಿ. ಸಮಯ ಸಿಗ್ತಿಲ್ಲ ಎಂದು ಎಂದೂ ಹೇಳಬೇಡಿ. ಇದು ಸ್ನೇಹಿತರ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆಯಿರುತ್ತದೆ.
ಆರೋಗ್ಯ ಸರಿಯಿಲ್ಲ ಅಥವಾ ಬೇರೆ ಊರಿಗೆ ಹೊರಟಿದ್ದೇನೆ ಹೀಗೆ ಯಾವುದೋ ಕಾರಣ ಹೇಳಬಹುದು.
ನನಗೆ ಒಳ್ಳೆ ಸ್ನೇಹಿತ ಮಾತ್ರ. ಸಂಬಂಧ ಮುಂದುವರೆಸುವ ಇಚ್ಛೆ ನನಗಿಲ್ಲ. ಡೇಟಿಂಗ್ ಬಗ್ಗೆ ನಾನು ಯೋಚನೆ ಮಾಡಿಲ್ಲ ಎನ್ನಬಹುದು. ಸ್ನೇಹಿತರ ಮನಸ್ಸಿಗೆ ನೋವಾಗದಂತೆ ಹೊಸ ವಿಧಾನಗಳ ಮೂಲಕ ನಿಧಾನವಾಗಿ ಅವರ ಮನವೊಲಿಸುವುದು ಒಳ್ಳೆಯದು.