ಮೈಗ್ರೇನ್ ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದ ಜೀವನ ಅನೇಕರ ಈ ಸಮಸ್ಯೆಗೆ ಕಾರಣವಾಗಿದೆ. ಸಂಶೋಧನೆಯೊಂದು ಕಿವಿ ವೈಫಲ್ಯ ಮೈಗ್ರೇನ್ ಗೆ ಕಾರಣವಾಗಬಹುದು ಎಂದಿದೆ. ಕಿವಿಯ ನರಗಳ ಸಮಸ್ಯೆಯಿಂದ ಮೈಗ್ರೇನ್ ಕಾಡುವ ಸಮಸ್ಯೆ ಹೆಚ್ಚಿರುತ್ತದೆಯಂತೆ.
ಮೈಗ್ರೇನ್ ನಿಂದ ಬಳಲುವವರು ತಲೆ ಜೊತೆ ಕಿವಿ ನೋವು ಎನ್ನುತ್ತಾರೆ. ಕಿವಿ ನರಗಳಲ್ಲಿ ಕಂಡು ಬರುವ ಸಮಸ್ಯೆ ಮೈಗ್ರೇನ್ ಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಮೈಗ್ರೇನ್ ನಿಂದ ಬಳಲುವವರು ಕಣ್ಣು ನೋವಿನ ಸಮಸ್ಯೆ ಅನುಭವಿಸುತ್ತಾರೆ. ವಾಕರಿಗೆ, ವಾಂತಿ ಕೂಡ ಇದಕ್ಕೆ ಕಾರಣವಾಗಿದೆ.
ಕೆಲವೊಂದು ಬೆಳಕು, ಧ್ವನಿ, ವಾಸನೆಯಿಂದಲೂ ಇದು ಬರುತ್ತದೆ. ದಿನವಿಡಿ ಕಾಡುವ ಅನಗತ್ಯ ಬೇಸರ ಮೈಗ್ರೇನ್ ಗೆ ಕಾರಣವಾಗುತ್ತದೆ. ಮೈಗ್ರೇನ್ ನಿಂದ ಬಳಲುವವರು ದಣಿವು ಹಾಗೂ ನಿದ್ರಾಹೀನತೆ ಸಮಸ್ಯೆಗೊಳಗಾಗ್ತಾರೆ.