ಶ್ರಾವಣ ಮಾಸ ಬರ್ತಿದ್ದಂತೆ ಮಹಿಳೆಯರು ಹಸಿರು ಬಳೆ, ಹಸಿರು ಬಟ್ಟೆ ಧರಿಸೋದನ್ನು ನೀವು ನೋಡಿರ್ತಿರಾ. ಶ್ರಾವಣ ಮಾಸದ ಒಂದು ತಿಂಗಳು ಬಹುತೇಕ ಜನರು ಸಾಮಾನ್ಯವಾಗಿ ಹಸಿರು ಬಣ್ಣದ ಬಟ್ಟೆ ಧರಿಸುತ್ತಾರೆ. ಇದಕ್ಕೆ ಧಾರ್ಮಿಕ ಪ್ರಾಮುಖ್ಯತೆ ಇದೆ. ಹಸಿರು ಬಣ್ಣದ ಉಪಯೋಗ ಮಾಡಿದ್ರೆ ಭಾಗ್ಯ ಲಭಿಸಲಿದೆ.
ಜ್ಯೋತಿಷ್ಯದ ಪ್ರಕಾರ ಹಸಿರು ಬಣ್ಣ ಅದೃಷ್ಣದ ಬಣ್ಣ. ಶ್ರಾವಣ ಮಾಸ ಬರ್ತಿದ್ದಂತೆ ಎಲ್ಲೆಡೆ ಹಸಿರನ್ನು ನಾವು ಕಾಣಬಹುದು. ಈ ಒಂದು ತಿಂಗಳು ಪ್ರಕೃತಿಯಲ್ಲಿ ನಾವು ಹಸಿರನ್ನು ಕಣ್ತುಂಬಿಕೊಳ್ಳಬಹುದು. ಹಾಗಾಗಿಯೇ ಶಿವನಿಗೆ ನೀರು ಹಾಕಿ ಪ್ರಕೃತಿಗೆ ನೀರು ಹಾಕಿದ ಫಲ ಪಡೆಯುತ್ತಾರೆ. ಹಸಿರು ಬಣ್ಣದ ಬಟ್ಟೆ ತೊಟ್ಟು ತಾವೂ ಪ್ರಕೃತಿಯಲ್ಲಿ ಒಂದಾಗಲು ಯತ್ನಿಸ್ತಾರೆ.
ಶಾಸ್ತ್ರಗಳ ಪ್ರಕಾರ ಪ್ರಕೃತಿಯನ್ನು ಈಶ್ವರನಿಗೆ ಹೋಲಿಸಲಾಗಿದೆ. ಈ ತಿಂಗಳೂ ಪೂರ್ತಿ ಹಸಿರು ಧರಿಸುವವರಿಗೆ ಶಿವನಿಂದ ವಿಶೇಷ ಕೃಪೆ ಲಭಿಸಲಿದೆ. ಮಹಿಳೆಯರು ಶ್ರಾವಣ ಮಾಸದಲ್ಲಿ ಹಸಿರು ಬಳೆ ಹಾಗೂ ಹಸಿರು ಬಟ್ಟೆ ಧರಿಸಿ ಶಿವನ ಪೂಜೆ ಮಾಡಿದ್ರೆ ಅವರು ಸುಮಂಗಲಿಯಾಗಿರ್ತಾರೆಂದು ಶಾಸ್ತ್ರ ಹೇಳುತ್ತದೆ.
ಹಸಿರು ಬುಧ ಗ್ರಹದ ಪ್ರತೀಕ. ಬುಧ ಗ್ರಹ ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ್ದು. ಶ್ರಾವಣ ಮಾಸದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸುವುದರಿಂದ ಬುಧ ಪ್ರಸನ್ನನಾಗ್ತಾನೆ. ಸಂಪತ್ತು, ಧನ, ಧಾನ್ಯವನ್ನು ನೀಡ್ತಾನೆ.
ಶ್ರಾವಣ ಮಾಸದಲ್ಲಿ ಹಸಿರು ಬಳೆ ಧರಿಸುವ ಮಹಿಳೆಯರು ಭಗವಂತ ವಿಷ್ಣುವಿನ ಕೃಪೆಗೂ ಪಾತ್ರರಾಗ್ತಾರಂತೆ.
ಹಸಿರು ಬಣ್ಣ ಪ್ರಕೃತಿ, ಫಲವತ್ತತೆ, ಸಮೃದ್ಧಿ, ಅದೃಷ್ಣ ಹಾಗೂ ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ಹೃದಯ ಸಂಬಂಧಿ ಖಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚಾಗಿ ಹಸಿರು ಬಣ್ಣವನ್ನು ಬಳಸಬೇಕು. ದಾಂಪತ್ಯದಲ್ಲಿ ಬಿರುಕು ಶುರುವಾಗಿದ್ದರೆ ಮಲಗುವ ಕೋಣೆಯ ಆಗ್ನೇಯ ದಿಕ್ಕಿನ ಗೋಡೆಗೆ ಹಸಿರು ಬಣ್ಣವನ್ನು ಬಳಿಯಬೇಕು.