ಲಂಡನ್‌ನಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ ಐಐಟಿ ಪದವೀಧರನೊಬ್ಬ ಎಲ್ಲರೂ ಹುಬ್ಬೇರಿಸುವಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. ಕೇವಲ 33 ವರ್ಷಗಳಿಗೇ ಕೆಲಸದಿಂದ ನಿವೃತ್ತನಾಗಿದ್ದಾನೆ. ಸ್ಯಾನ್ ಫ್ರಾನ್ಸಿಸ್ಕೋ ನಿವಾಸಿ ದೇಬಾರ್ಯ ದಾಸ್ ಈ ಕುರಿತ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದು, ಅದು ಭಾರೀ ಸಂಚಲನ ಸೃಷ್ಟಿಸಿದೆ.
ಲಂಡನ್‌ನಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ ಅವಿವಾಹಿತ ಐಐಟಿ ಪದವೀಧರ ದೇಬಾರ್ಯ. ಈಗಾಗ್ಲೇ 12-20 ಕೋಟಿ ರೂಪಾಯಿ ಉಳಿತಾಯ ಮಾಡಿಕೊಂಡಿದ್ದಾರಂತೆ. ಹಾಗಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕೆಲಸದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ದೆಹಲಿಯಲ್ಲಿ ಆರಾಮವಾಗಿ ಜೀವನವನ್ನು ಎಂಜಾಯ್ ಮಾಡ್ತಿದ್ದಾರಂತೆ.
ಅವರ ಈ ನಿರ್ಧಾರದ ಹಿಂದೆ 6 ದೊಡ್ಡ ಕಾರಣಗಳಿವೆ. ಪೋಷಕರೊಂದಿಗೆ ವಾಸಿಸುವುದು, ಮನೆಕೆಲಸ ಮಾಡಲು ಸೇವಕರನ್ನು ಹೊಂದುವುದು, ಭಾರತದಲ್ಲಿ ಅಗ್ಗದ ಜೀವನ, ಕಡಿಮೆ ಸ್ನೇಹಿತರು ಮತ್ತು ವಿದೇಶ ಪ್ರವಾಸಕ್ಕೆ ಅವಕಾಶಗಳು, ಜೊತೆಗೆ ಬ್ರಿಟನ್‌ನ ಆರ್ಥಿಕತೆಯ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯ.
ದೇಬಾರ್ಯ 2012 ರಲ್ಲಿ ಐಐಟಿ ದೆಹಲಿಯಿಂದ ಉತ್ತೀರ್ಣರಾದರು. ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಉತ್ತಮ ಕಮಾಂಡ್ ಹೊಂದಿದ್ದರು. ಬೆಂಗಳೂರಿನ ಬ್ಯಾಂಕಿನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ ನಂತರ ಲಂಡನ್‌ಗೆ ಹೋಗಿ ಅಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರು ತಂತ್ರಜ್ಞಾನ ಕಂಪನಿಗೆ ಸ್ಥಳಾಂತರಗೊಂಡರು. ಒಟ್ಟಾರೆಯಾಗಿ 11 ವರ್ಷಗಳ ಈ ಪ್ರಯಾಣವು ಅದ್ಭುತವಾಗಿದೆ ಮತ್ತು ಅವರ ಸಂಬಳವೂ ಹೆಚ್ಚುತ್ತಲೇ ಇತ್ತು. ಹಾಗಾಗಿ 33ರ ಹರೆಯದಲ್ಲೇ ನಿವೃತ್ತಿಗೆ ಮುಂದಾಗಿದ್ದಾರೆ.
ಭಾರತಕ್ಕೆ ಮರಳಲು ನಿರ್ಧರಿಸಿದ ನಂತರ ಅವರು ಆರಾಮದಾಯಕ ಜೀವನವನ್ನು ನಡೆಸಲು ಎಷ್ಟು ಖರ್ಚಾಗಬಹುದು ಎಂಬುದನ್ನು ಲೆಕ್ಕ ಹಾಕಿದ್ದಾರೆ. ಲಂಡನ್‌ನಲ್ಲಿನ ಜೀವನಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆಯಾಗಿತ್ತು. ಸುಮಾರು 25 ರಿಂದ 50 ಪ್ರತಿಶತದಷ್ಟು ಕಡಿಮೆ ಖರ್ಚಾಗುತ್ತದೆ. ಹಾಗಾಗಿಯೇ ಲಂಡನ್ ಜಂಜಾಟ ಬಿಟ್ಟು ಭಾರತದಲ್ಲೇ ನೆಲೆಸುವ ನಿರ್ಧಾರ ಮಾಡಿದ್ದಾರೆ.