alex Certify ಯೋಗ ಮಾಡುವ ಮಧ್ಯೆ ನೀರು ಕುಡಿಯದಿರುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಮಾಡುವ ಮಧ್ಯೆ ನೀರು ಕುಡಿಯದಿರುವುದರ ಹಿಂದಿದೆ ಈ ಕಾರಣ

ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯೋಗ ಅಭ್ಯಾಸ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾರದು.

ತುಂಬಾ ದಾಹವಾದರೆ ಒಂದು ಗುಟುಕು ಕುಡಿಯಬಹುದು, ಆದರೆ ನೀರು ಕುಡಿಯದಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆ ಗೊತ್ತಾ….?

* ಯೋಗ ಎನ್ನುವುದು ದೇಹ ಹಾಗೂ ಮನಸ್ಸನ್ನು ಒಂದಾಗಿಸುವ ಒಂದು ಕಲೆ. ಯೋಗ ಮಾಡುವಾಗ ಮನಸ್ಸಿನ ಮೇಲಿನ ನಿಯಂತ್ರಣ ತುಂಬಾ ಮುಖ್ಯ. ನೀರು ಕುಡಿಯಲು ಎದ್ದಾಗ ಮನಸ್ಸು ಬೇರೆ ಕಡೆ ವಾಲುತ್ತದೆ.

* ಯೋಗ ಅಭ್ಯಾಸ ಮಾಡುವಾಗ ತುಂಬಾ ನೀರು ಕುಡಿದರೆ ನೈಸರ್ಗಿಕ ಕರೆಗೆ ಎದ್ದು ಹೋಗಬೇಕು. ನೈಸರ್ಗಿಕ ಕರೆ ತಡೆಗಟ್ಟಿ ಯೋಗಾಸನಗಳನ್ನು ಮಾಡಬಾರದು.

* ಕೆಲವೊಂದು ಯೋಗ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆಗ ನೀರು ಕುಡಿದರೆ ದೇಹದ ಉಷ್ಣತೆ ಬೇಗನೆ ಕಡಿಮೆಯಾಗುವುದು ಅಲ್ಲದೆ ಶೀತ ಉಂಟಾಗುವ ಸಾಧ್ಯತೆ ಇದೆ.

* ಹೊಟ್ಟೆಯಲ್ಲಿ ಅಧಿಕ ನೀರಿದ್ದರೆ ಆಸನಗಳನ್ನು ಮಾಡಲು ಕಷ್ಟವಾಗುತ್ತದೆ.

* ಯೋಗ ಮಾಡುವ ಅರ್ಧ ಗಂಟೆ ಮುಂಚೆ ಸ್ವಲ್ಪ ನೀರು ಕುಡಿಯಿರಿ. ಯೋಗ ಮುಗಿಸಿದ ತಕ್ಷಣ ನೀರು ಕುಡಿಯಬಾರದು. ಒಂದು ಅರ್ಧ ತಾಸು ಬಿಟ್ಟು ನೀರು ಕುಡಿದರೆ ಒಳ್ಳೆಯದು.

* ಇನ್ನು ಯೋಗ ಮಾಡುವ ಮುಂಚೆ ಒಂದೆರಡು ಡ್ರೈ ಫ್ರೂಟ್ಸ್ ತಿಂದರೆ ಶಕ್ತಿ ದೊರೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...