ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು ತಿಳಿಯೋಣ.
1.ಅಧಿಕ ನಿದ್ರೆಗೆ ಮುಖ್ಯ ಕಾರಣ ತಾಪಮಾನ. ತಣ್ಣನೆಯ ವಾತಾವರಣ ಮನುಷ್ಯರನ್ನು ನಿದ್ರೆಗೆ ಜಾರಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಜನರು ಹೆಚ್ಚು ನಿದ್ರೆ ಮಾಡುತ್ತಾರೆ.
2. ಚಳಿಗಾಲದಲ್ಲಿ ಜನರು ಮನೆಗಳ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಎಲೆಕ್ಟ್ರಾನಿಕ್ ಲೈಟ್ಸ್ ನ್ನು ಬಳಸುತ್ತಾರೆ. ಇದರಿಂದ ಹಾರ್ಮೋನ್ ಅಸಮತೋಲನ ಉಂಟಾಗಿ ನಿದ್ರೆಯನ್ನು ಹೆಚ್ಚಿಸುತ್ತದೆ.
3. ಚಳಿಗಾಲದಲ್ಲಿ ಬೆಚ್ಚಗಿನ ಆಹಾರವನ್ನು ಸೇವಿಸುತ್ತೇವೆ. ಇದರಿಂದ ದೇಹವು ಬೆಚ್ಚಗಾಗುತ್ತದೆ. ಆಗ ವಾತಾವರಣದ ತಾಪಮಾನದ ಜೊತೆಗೆ ದೇಹದ ತಾಪಮಾನ ಸಮತೋಲನವಾಗಿ ದೇಹ ವಿಶ್ರಾಂತಿ ಪಡೆಯಲು ನಿದ್ರೆಗೆ ಜಾರುತ್ತದೆ.
4. ಚಳಿಗಾಲದಲ್ಲಿ ದೈಹಿಕ ಚಟುವಟಿಕೆಗಳನ್ನು ಮಾಡುವುದನ್ನು ನಿಲ್ಲಿಸುತ್ತಾರೆ. ಇದರಿಂದ ದೇಹದಲ್ಲಿ ಕೊಬ್ಬು ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ. ಇದು ನಿದ್ರೆ ಹೆಚ್ಚಾಗಲು ಸಹಾಯ ಮಾಡುತ್ತದೆ.