
ಲ್ಯಾಪ್ ಟಾಪ್, ಮೊಬೈಲ್ ಗೆ ಚಾರ್ಜ್ ಮಾಡಲು ವೈಯರ್ ಗಳನ್ನು ಬಳಸುತ್ತೇವೆ. ಚಾರ್ಜ್ ಮಾಡಿದ ಬಳಿಕ ಅದನ್ನು ಮಡಚಿ ಇಡದೆ ಹಾಗೇ ಬಿಟ್ಟು ಬರುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡಿದ್ರೆ ಏನಾಗುತ್ತದೆ ಗೊತ್ತಾ?
ವಾಸ್ತು ಪ್ರಕಾರ ಚಾರ್ಜ್ ವೈಯರ್ ಗಳನ್ನು ಮಡಚಿಡದೆ ಹಾಗೇ ಬಿಟ್ಟು ಬರುವುದು ಸರಿಯಲ್ಲ. ಇದು ನಕಾರಾತ್ಮಕತೆಯನ್ನು ಹರಡುತ್ತದೆಯಂತೆ. ಕುಟುಂಬದ ಸದಸ್ಯರ ಸ್ವಭಾವವನ್ನು ಕೆರಳಿಸುತ್ತದೆಯಂತೆ. ಇದರಿಂದ ಮನೆಯಲ್ಲಿ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ.
ಹಾಗಾಗಿ ಯಾವುದೇ ಚಾರ್ಜ್ ವೈಯರ್ ನ್ನು ಬಳಸಿದ ಬಳಿಕ ಮಡಚಿ ಬಂದರೆ ಉತ್ತಮ ಎನ್ನಲಾಗಿದೆ. ಇಲ್ಲವಾದರೆ ಚಾರ್ಜ್ ವೈಯರ್ ತುಂಬಾ ಉದ್ದವಾಗಿದ್ದರೆ ಅದರ ಹೆಚ್ಚುವರಿ ಭಾಗವನ್ನು ದಾರದ ಸಹಾಯದಿಂದ ಮಡಚಿ ಕಟ್ಟಿ ಎಂದು ವಾಸ್ತು ಶಾಸ್ತ್ರ ಜ್ಞರು ಹೇಳುತ್ತಾರೆ.