ಚಿಕನ್ ಮಾಂಸಾಹಾರಿಗಳ ಫೇವರಿಟ್ ಫುಡ್‌ಗಳಲ್ಲೊಂದು. ಜಗತ್ತಿನಲ್ಲಿ ಮಾಂಸಾಹಾರಿಗಳ ಸಂಖ್ಯೆ ಸಾಕಷ್ಟಿದೆ. ಕೋಳಿ ಮೊಟ್ಟೆ ಮತ್ತು ಮಾಂಸ ಎರಡಕ್ಕೂ ವಿಪರೀತ ಬೇಡಿಕೆಯಿದೆ. ಏಕೆಂದರೆ ಇದು ಮಾನವರಿಗೆ ಪ್ರೋಟೀನ್‌ನ ದೊಡ್ಡ ಮೂಲವಾಗಿದೆ.
ಪ್ರಪಂಚದಾದ್ಯಂತ ಹಲವಾರು ಬಗೆಯ ಕೋಳಿ ತಳಿಗಳಿವೆ. ಅವುಗಳಲ್ಲಿ ಕೆಲವು ತುಂಬಾನೇ ದುಬಾರಿ. ಕೆಲವು ಕೋಳಿಗಳನ್ನು ಖರೀದಿಸಲು ಸಾವಿರಾರು ಡಾಲರ್ ವೆಚ್ಚ ಮಾಡಬೇಕಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಕೋಳಿಯನ್ನು ‘ಆಯಮ್ ಸೆಮಾನಿ’ ಎಂದು ಕರೆಯಲಾಗುತ್ತದೆ. ಇದು ದುಬಾರಿ ಮಾತ್ರವಲ್ಲದೆ, ವಿಶಿಷ್ಟವಾದ ಅತ್ಯುತ್ತಮ ಗುಣಗಳನ್ನು ಹೊಂದಿದೆ.
ದುಬಾರಿ ಲ್ಯಾಂಬೋರ್ಗಿನಿ ಚಿಕನ್
ಕೋಳಿಯ ಈ ತಳಿಯನ್ನು ಫೈಬ್ರೊ ಮೆಲನೋಸಿಸ್ ಎಂದು ಕರೆಯಲಾಗುತ್ತದೆ. ಅಪರೂಪದ ಸ್ಥಿತಿಯ ಕಾರಣದಿಂದಾಗಿ ಇದು ಹೆಚ್ಚು ಮೌಲ್ಯ ಹೊಂದಿದೆ. ಗಾಢ ಬಣ್ಣವನ್ನು ಹೊಂದಿರೋ ಈ ಕೋಳಿಯ ಮಾಂಸ, ಗರಿಗಳು ಮತ್ತು ಮೂಳೆಗಳು ಸಹ ಕಪ್ಪು ಬಣ್ಣದಲ್ಲಿರುತ್ತವೆ. ಇದೇ ಕಾರಣಕ್ಕೆ ಇದಕ್ಕೆ ಲ್ಯಾಂಬೋರ್ಗಿನಿ ಚಿಕನ್ ಎಂದು ಹೆಸರಿಡಲಾಗಿದೆ.
ಇಂಡೋನೇಷ್ಯಾದ ಜಾವಾದಲ್ಲಿ ಈ ತಳಿಯ ಕೋಳಿಗಳು ಕಂಡುಬರುತ್ತವೆ. ವರದಿಗಳ ಪ್ರಕಾರ ಇದರ ಬೆಲೆ 2,500 ಡಾಲರ್, ಅಂದರೆ ಸುಮಾರು 2,08,134 ರೂಪಾಯಿ, ಈ ಕೋಳಿಗಳು ಬಹಳ ವೇಗವಾಗಿ ಬೆಳೆಯುತ್ತವೆ ಮತ್ತು ಆದ್ದರಿಂದ ಇತರ ಕೋಳಿ ತಳಿಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರೋಟೀನ್ ಇವುಗಳ ಮಾಂಸದಲ್ಲಿರುತ್ತದೆ. ಅಪರೂಪದ ಮತ್ತು ರುಚಿಕರ ಲ್ಯಾಂಬೋರ್ಗಿನಿ ಚಿಕನ್ ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಇತರ ಕೋಳಿ ತಳಿಗಳಿಗೆ ಹೋಲಿಸಿದರೆ ಇದರ ಮಾಂಸವು ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಉತ್ತಮ ಮೂಲವಾಗಿದೆ. ಈ ವಿಶ್ವದಲ್ಲಿ ಮಾರಾಟವಾಗುವ ಇತರ ದುಬಾರಿ ಕೋಳಿಗಳೆಂದರೆ ವಿಯೆಟ್ನಾಂನ ಡಾಂಗ್ ಟಾವೊ – ಬೆಲೆ 1,66,507 ರೂಪಾಯಿ, ಜರ್ಮನಿಯ ಡೆತ್‌ಲೇಯರ್ – ಬೆಲೆ 20813 ರೂಪಾಯಿ, ಬೆಲ್ಜಿಯಂನ ಲೀಜ್ ಫೈಟರ್ – ಬೆಲೆ 12,488 ರೂಪಾಯಿ, ಸ್ವೀಡನ್‌ನ ಓರೆಸ್ಟ್ ಮತ್ತು ಒಲ್ಯಾಂಡ್‌ಸ್ಕ್ ಡ್ವಾರ್ಫ್ – ಬೆಲೆ 8,325 ರೂಪಾಯಿ.