ಧೂಮಕೇತುವೊಂದು ಭೂಮಿಕಡೆ ಧಾವಿಸಿ ಬರುತ್ತಿರುವುದನ್ನು ಖಗೋಳ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಾಗೆಯೇ ಇದು ಸಾಮಾನ್ಯವಾದುದ್ದಲ್ಲ ಎಂದು ಎಚ್ಚರಿಸಿದ್ದಾರೆ.
ಸಾಮಾನ್ಯಕ್ಕಿಂತ 50 ಪಟ್ಟು ದೊಡ್ಡದಾದ ನ್ಯೂಕ್ಲಿಯಸ್ ಹೊಂದಿರುವ ಧೂಮಕೇತು ಬರುವುದನ್ನು ನಾಸಾದ ಹಬಲ್ ದೂರದರ್ಶಕ ದೃಢಪಡಿಸಿದೆ.
ಬೆಂಗಳೂರಿನಲ್ಲಿ 2 ಸಿಡಿ ಕಾರ್ಖಾನೆಗಳಿವೆ; ಶಾಸಕ ಯತ್ನಾಳ್ ರಿಂದ ಹೊಸ ಬಾಂಬ್
ಅಂದಾಜು ಗಂಟೆಗೆ ಸರಿಸುಮಾರು 35,404 ಕಿಮೀ ವೇಗದಲ್ಲಿ ಬರುತ್ತಿರುವುದರ ಮಾಹಿತಿಯನ್ನು ಲಾಸ್ ಏಂಜಲೀಸ್ ನಲ್ಲಿ ಗ್ರಹಗಳ ವಿಜ್ಞಾನ ಮತ್ತು ಖಗೋಳಶಾಸ್ತ್ರದ ಪ್ರಾಧ್ಯಾಪಕ ಡೇವಿಡ್ ಜೆವಿಟ್ ಖಚಿತಪಡಿಸಿದ್ದಾರೆ.
ನಾಸಾದ ಅಧಿಕೃತ ಟ್ವಿಟರ್ ಪುಟದಲ್ಲಿ ಹಲವಾರು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.