ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ಉರಿ ಕಾಣಿಸಿಕೊಳ್ಳುವುದು ನೀವೇ ಮಾಡುವ ಕೆಲವು ತಪ್ಪುಗಳಿಂದಾಗಿ, ಇದು ಯಾವುದು, ಇದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೀರು ಅಥವಾ ದ್ರವ ರೂಪದ ಇತರ ಪಾನೀಯಗಳನ್ನು ಸೇವಿಸುವುದು ಬಹಳ ಮುಖ್ಯ.
ಕೆಲವು ಬಾರಿ ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ಸೇವಿಸುವುದರಿಂದಲೂ ಈ ನೋವು ಕಂಡು ಬರಬಹುದು. ಇದರ ತೀವ್ರತೆ ವಿಪರೀತ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಮಾತ್ರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಹೀಗೆ ನೋವು ಕಾಣಿಸಿಕೊಂಡಾಗ ಲವಂಗದ ಎಣ್ಣೆಯನ್ನು ಆಹಾರದೊಂದಿಗೆ ಸೇವಿಸಿ. ಇದು ಬ್ಯಾಕ್ಟೀರಿಯಾ ಸೋಂಕನ್ನು ತಡೆಗಟ್ಟುತ್ತದೆ. ಆದರೆ ಎರಡು ವಾರಕ್ಕಿಂತ ಹೆಚ್ಚಿನ ಕಾಲ ಇದನ್ನು ಸೇವಿಸದಿರಿ.
ವಿಟಮಿನ್ ಸಿ ಹೆಚ್ಚಿರುವ ವಸ್ತುಗಳನ್ನು ಸೇವಿಸಿ. ಸ್ಟ್ರಾಬೆರಿ, ಪಪ್ಪಾಯ, ಕಿತ್ತಳೆ, ಪೇರಳೆ ಹಣ್ಣುಗಳನ್ನು ನಿಮ್ಮ ಆಹಾರದ ಮೆನುವಿನಲ್ಲಿ ಸೇರಿಸಿ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.