ಹೂ ತೋಟದಲ್ಲಿ ಹಾದು ಹೋಗ್ತಾ ಇದ್ದರೆ, ಘಮ್ಮೆನ್ನುವ ಹೂವಿನ ಪರಿಮಳ ಮೂಗಿಗೆ ಸೋಕಿದರೆ ಆಹ್ಲಾದಕರವೆನಿಸುತ್ತದೆ.
ಆದರೆ ಸುವಾಸನೆ ಬರೀ ಆಹ್ಲಾದಕರ ಮಾತ್ರವಲ್ಲ, ಅದರಲ್ಲಿ ಔಷಧೀಯ ಗುಣವೂ ಇದೆ. ಕೆಲವು ನಿರ್ಧಿಷ್ಟ ಸುವಾಸನೆಗಳು ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ತಿಳಿಯಿರಿ.
* ಮಲ್ಲಿಗೆ, ರೋಸ್ಮೆರಿ ಸುವಾಸನೆ ನೆನಪಿನ ಶಕ್ತಿಗೆ ತುಂಬಾ ಒಳ್ಳೆಯದು.
* ಕೆಲವೊಮ್ಮೆ ಯಾವುದೋ ಕಾರಣಕ್ಕೆ ತುಂಬಾ ಕಿರಿಕಿರಿ ಅನಿಸುತ್ತದೆ. ಆಗ ಗುಲಾಬಿ, ಚಕ್ಕೆಯ ಸುವಾಸನೆ ಗ್ರಹಿಸಿದರೆ ಮೆದುಳು ರಿಲ್ಯಾಕ್ಸ್ ಆಗುತ್ತದೆ.
* ಖಿನ್ನತೆಯಿಂದ ಹೊರಬರಲು ಮಲ್ಲಿಗೆ, ಲ್ಯಾವೆಂಡರ್, ಗುಲಾಬಿ, ಚಂದನ ಇವುಗಳ ಸುವಾಸನೆ ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ.
* ಆತ್ಮವಿಶ್ವಾಸ ಹೆಚ್ಚಿಸಲು ಚಂದನ ಹಾಗೂ ಮಲ್ಲಿಗೆ ಹೂವಿನ ವಾಸನೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.
* ಅತ್ಯಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಲ್ಯಾವೆಂಡರ್, ನಿಂಬೆಹಣ್ಣು ಇವುಗಳ ವಾಸನೆ ಗ್ರಹಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.
* ರೊಮ್ಯಾನ್ಸ್ ಮೂಡ್ಗೆ ಮಲ್ಲಿಗೆ ಹೂ, ಗುಲಾಬಿ, ಚಂದನ, ವೆನಿಲ್ಲಾ ಇವುಗಳ ಸುವಾಸನೆ ದೇಹದಲ್ಲಿ ರೊಮ್ಯಾನ್ಸ್ ಹಾರ್ಮೋನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ.
* ತುಂಬಾ ಕೋಪ ಬಂದಾಗ ಮಲ್ಲಿಗೆ ಅಥವಾ ಗುಲಾಬಿ ಹೂವಿನ ವಾಸನೆಯನ್ನು ಗ್ರಹಿಸಿ ನೋಡಿ, ಕೋಪ ಕ್ಷಣಾರ್ಧದಲ್ಲಿ ಇಳಿದಿರುತ್ತದೆ.