alex Certify ʼವಿಟಮಿನ್ ಡಿʼ ಕೊರತೆಗೆ ಇದೇ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಟಮಿನ್ ಡಿʼ ಕೊರತೆಗೆ ಇದೇ ಕಾರಣ

ವಿಟಮಿನ್ ಡಿ ಕೊರತೆ ಕೂಡ ಕೊರೊನಾ ವೈರಸ್ ದಾಳಿಗೆ ಕಾರಣವಾಗ್ತಿದೆ. ಹೊರ ಅಧ್ಯಯನವೊಂದರ ಪ್ರಕಾರ, ವಿಶ್ವದಲ್ಲಿ ಬಹುತೇಕ ಜನರಿಗೆ ವಿಟಮಿನ್ ಡಿ ಕೊರತೆಯಿದೆ. ಕಳೆದ 500 ವರ್ಷಗಳಿಂದ ಜನರು ವಿಟಮಿನ್ ಡಿ ಕೊರತೆಗೊಳಗಾಗ್ತಿದ್ದಾರೆ. ಇದ್ರ ಹಿಂದಿನ ಕಾರಣ ಕುತೂಹಲ ಕೆರಳಿಸಿದೆ.

ಕಳೆದ 500 ವರ್ಷಗಳಿಂದ ಪ್ರಪಂಚದಾದ್ಯಂತ ಜನರಲ್ಲಿ ವಿಟಮಿನ್ ಡಿ ಕೊರತೆಗೆ ಮುಖ್ಯ ಕಾರಣ ವಲಸೆ. ಇದು ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ. ಬಿಸಿಲು ಹೆಚ್ಚಾಗ್ತಿದ್ದಂತೆ ಅಥವಾ ಬಿಸಿಲು ಹೆಚ್ಚಿರುವ ಪ್ರದೇಶದಿಂದ ಜನರು ತಣ್ಣನೆಯ ಪ್ರದೇಶಕ್ಕೆ ವಲಸೆ ಬರ್ತಿದ್ದಾರೆ. ಸ್ವಲ್ಪ ಬಿಸಿಲು ಹೆಚ್ಚಾಗ್ತಿದ್ದಂತೆ ಜನರು ಊರು ಬಿಡ್ತಾರೆ. ಶೀತ ಪ್ರದೇಶದಲ್ಲಿ ವಿಟಮಿನ್ ಡಿ ಕೊರತೆ ಕಾಡುವುದು ಸಾಮಾನ್ಯ.

ವಿಟಮಿನ್ ಡಿ ಕೊರತೆಯಿಂದ ಕೊರೊನಾ, ಹೃದ್ರೋಗ, ಮಧುಮೇಹ, ಒತ್ತಡ ಮತ್ತು ಕೆಲವು ರೀತಿಯ ಕ್ಯಾನ್ಸರ್ ಕಾಡುತ್ತದೆ. ಶೀತ ಪ್ರದೇಶಗಳಲ್ಲಿ ವಾಸಿಸುವ ಕೆಲವರು ಈ ಕೊರತೆಯಿಂದ ರಕ್ಷಣೆ ಪಡೆಯಲು ಸಮುದ್ರ ತೀರಕ್ಕೆ ಬರ್ತಾರೆ.

ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯ ಮತ್ತು ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಸಂಶೋಧಕರು ಒಟ್ಟಾಗಿ ಸಂಶೋಧನೆ ನಡೆಸಿದ್ದಾರೆ. ಕಳೆದ 500 ವರ್ಷಗಳಲ್ಲಿ ಜನರು ದಕ್ಷಿಣ ಪ್ರದೇಶಗಳಿಂದ ಉತ್ತರದ ಪ್ರದೇಶಗಳ ಕಡೆಗೆ ವಲಸೆ ಬಂದಿದ್ದಾರೆ. ನೇರಳಾತೀತ ಕಿರಣಗಳ ಪರಿಣಾಮ ಹೆಚ್ಚಿರುವ ಸ್ಥಳಗಳನ್ನು ಬಿಡುವ ಜನರು ಈ ಕಿರಣಗಳ ಪ್ರಭಾವ ಕಡಿಮೆಯಿರುವ ಪ್ರದೇಶದಲ್ಲಿ ವಾಸ ಶುರು ಮಾಡಿದ್ದಾರೆ. ಅಂಥವರಲ್ಲಿ ವಿಟಮಿನ್ ಡಿ ಕೊರತೆ ಎದ್ದು ಕಾಣ್ತಿದೆ.

ಸೂರ್ಯನ ಬೆಳಕಿಗೆ ಬಂದಾಗ ವಿಟಮಿನ್ ಡಿ ಹೆಚ್ಚಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದಕ್ಕಾಗಿ ನಾವು ನಮ್ಮ ದೇಹವನ್ನು ಸಾಕಷ್ಟು ಸಮಯದವರೆಗೆ ಸೂರ್ಯನ ಬೆಳಕಿನಲ್ಲಿ ಇಡಬೇಕು. ಆದರೆ ಜನರು ಎಸಿ ಕಾರು, ಮನೆ, ಕಚೇರಿಯಲ್ಲಿ ತಿಂಗಳುಗಟ್ಟಲೆ ಕೆಲಸ ಮಾಡುತ್ತಾರೆ. ಸೂರ್ಯನ ಕಿರಣಕ್ಕೆ ಮೈ ಒಡ್ಡುವುದಿಲ್ಲ. ಇದರ ಫಲಿತಾಂಶವೆಂದರೆ ವಿಟಮಿನ್ ಡಿ ಕೊರತೆ. ವಿಟಮಿನ್ ಡಿ ಮಾತ್ರೆ ಸೇವನೆಯಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಆದ್ರೆ ಅಪಾಯ ಕಡಿಮೆಯಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...