ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು, ಇದು ನಗರ ವಾಸಿಗಳ ಲೈಫ್ ಸ್ಟೈಲ್. ಆದರೆ ಆಫೀಸ್ ಗೆ ಹೋಗುವಾಗ ಗಡಿಬಿಡಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಅರೆಬರೆ ಬ್ರೇಕ್ ಫಾಸ್ಟ್ ಸೇವಿಸಿ ಓಡುವುದು ಎಲ್ಲರ ಜಾಯಮಾನ.
ಹಾಗಿದ್ದರೆ ಬ್ರೇಕ್ ಫಾಸ್ಟ್ ಸೇವಿಸಲು ಸೂಕ್ತ ಸಮಯ ಯಾವುದು ಅಂತೀರಾ…? ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಎದ್ದ ಒಂದರಿಂದ ಎರಡು ಗಂಟೆಯೊಳಗೆ ಉಪಾಹಾರ ಸೇವಿಸುವುದು ಸೂಕ್ತ. ಎದ್ದ ತಕ್ಷಣವೇ ಸೇವಿಸುವುದು ಒಳ್ಳೆಯದಲ್ಲ.
ಹಾಗೆಯೇ ತುಂಬಾ ಹೊತ್ತು ಹಸಿದು ಕೂರುವುದೂ ಅಸಿಡಿಟಿಯಂತಹ ಸಮಸ್ಯೆ ತರುತ್ತದೆ. ಈ ರೀತಿ ಮಾಡುವುದರಿಂದ ಹೊತ್ತಲ್ಲದ ಹೊತ್ತಿನಲ್ಲಿ ಹಸಿವು, ಬೇಡದ ಆಹಾರದ ಕಡೆಗೆ ಆಕರ್ಷಣೆ ಬೆಳೆಯುವುದಿಲ್ಲ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ.