ಈಗಂತೂ… ಯಾಕೋ ಗೊತ್ತಿಲ್ಲ, ಕೂದಲು ಉದುರುತ್ತಿದೆ ಅಂತ ಹೇಳುವವರೇ ಜಾಸ್ತಿ. ಇದಕ್ಕೆ ಒತ್ತಡ, ಬದಲಾದ ಜೀವನಶೈಲಿ ಕೂಡ ಕಾರಣ ಆಗಿರಬಹುದು.
ಈ ಸಮಸ್ಯೆಗಳಿಂದ ಹೊರಬರಬೇಕೆಂದರೆ ಕೆಲವೊಂದು ಮನೆಯ ಮದ್ದನ್ನು ಬಳಸಿ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿದೆ ನೋಡಿ ಕೆಲ ಸಲಹೆಗಳು.
ದಾಸವಾಳ
ಈ ಹೂವಿನ ರಸವನ್ನು ಪ್ರತಿದಿನ ಕೊಬ್ಬರಿ ಎಣ್ಣೆ ಹಚ್ಚುವ ಹಾಗೆ ತಲೆಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಒಂದು ಹಂತಕ್ಕೆ ಬರುತ್ತದೆ. ಇಲ್ಲವೇ ಒಣಗಿದ ಎಲೆಗಳನ್ನು ನೀರಿನಲ್ಲಿ ಹಾಕಿ ಬಿಸಿಮಾಡಿ ತೆಳುವಾದ ಬಟ್ಟೆಯಲ್ಲಿ ಶೋಧಿಸಿ ತಣ್ಣಗೆ ಮಾಡಿ ನಂತರ ಆ ರಸವನ್ನು ತಲೆಗೆ ಹಚ್ಚಿಕೊಳ್ಳಬಹುದು.
ದಾಸವಾಳದ ಎಣ್ಣೆ
4 ಕಪ್ಪು ದಾಸವಾಳ ಹೂವಿನ ರಸ ಇಲ್ಲ ಕಷಾಯಕ್ಕೆ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚಿಕ್ಕದಾದ ಉರಿಯ ಮೇಲಿಟ್ಟು ಕಾಯಿಸಿ ತಣ್ಣಗಾಗಲು ಬಿಡಬೇಕು. ನಂತರ ಶೋಧಿಸಿ ಶುಭ್ರವಾದ ಗಾಜಿನ ಸೀಸೆಯಲ್ಲಿಟ್ಟುಕೊಂಡು ತಲೆಗೆ ಎಣ್ಣೆಯಾಗಿ ಬಳಸಬಹುದು. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಕಪ್ಪಾಗಿ ಬದಲಾಗುತ್ತದೆ.
ನೆಲ್ಲಿಕಾಯಿ
ಇದು ತಲೆಕೂದಲಿಗೆ ಉತ್ತಮವಾದ ಔಷಧಿ. ತಲೆ ಸ್ನಾನ ಮಾಡಿದ ನಂತರ ಅರ್ಧ ಕಪ್ ನೆಲ್ಲಿ ರಸದಿಂದ ತಲೆಯನ್ನು ನೆನೆಸಿಕೊಳ್ಳಬೇಕು. ಆಮೇಲೆ ತಲೆ ಕೂದಲನ್ನು ತೊಳೆದುಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಆಮ್ಲ ಎಣ್ಣೆ
4 ಕಪ್ಪು ನೆಲ್ಲಿಯ ರಸ ಇಲ್ಲ ಕಷಾಯಕ್ಕೆ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚಿಕ್ಕದಾದ ಉರಿಯ ಮೇಲಿಟ್ಟು ಕಾಯಿಸಿ ತಣ್ಣಗೆ ಮಾಡಬೇಕು. ಈ ಎಣ್ಣೆಯನ್ನು ದಿನಾ ತಲೆಗೆ ಬಳಸಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.