ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಈ ಇಂಗು ಎಂದರೇನು, ಇದರ ಉಪಯೋಗಗಳೇನು ಎಂಬುದು ನಿಮಗೆ ಗೊತ್ತೇ..?
ಇಂಗು ಎಂಬುದು ಅಸಪೊಯ್ಟಿಡ ಎಂಬ ಒಂದು ಜಾತಿಯ ಮೇಣ. ಇದನ್ನು ಸಾರು ಸಾಂಬಾರುಗಳಿಗೆ ವಿಭಿನ್ನ ರುಚಿ ನೀಡಲು ಬಳಸಲಾಗುತ್ತದೆ. ಗ್ಯಾಸ್ಟ್ರಿಕ್ ನಿಂದ ಹೊಟ್ಟೆ ನೋವು ಕಾಡುತ್ತಿದ್ದರೆ ಹುಳಿ ಮಜ್ಜಿಗೆಯಲ್ಲಿ ಇಂಗು ಕರಗಿಸಿ ಉಪ್ಪು ಬೆರೆಸಿ ಕುಡಿಯಿರಿ. ಹೊಟ್ಟೆ ನೋವು, ಹೊಟ್ಟೆಯುಬ್ಬರ ತಕ್ಷಣ ಕಡಿಮೆಯಾಗುತ್ತದೆ.
ಇಂಗು ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ, ಅಸ್ತಮಾ ರೋಗಿಗಳಿಗೆ ನೆರವಾಗುತ್ತದೆ. ಹಾಗೆಂದು ನಿತ್ಯ ಇದನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದಲ್ಲ. ವಾರದಲ್ಲಿ ಎರಡರಿಂದ ಮೂರು ಬಾರಿ ಬಳಸಿ.
ಗ್ಯಾಸ್ಟ್ರಿಕ್ ಉಂಟುಮಾಡುವ ತರಕಾರಿಗಳ ಪಲ್ಯ, ಸಾಂಬಾರು ತಯಾರಿಸುವಾಗ ತುಸು ಇಂಗು ಕರಗಿಸಿ ಹಾಕಿ. ಇದರಿಂದ ನಿಮಗೆ ಆಸಿಡಿಟಿ ಸಮಸ್ಯೆ ಕಾಡುವುದಿಲ್ಲ. ಹಲ್ಲು ನೋವಿದ್ದ ಜಾಗಕ್ಕೆ ಚೂರು ಇಂಗು ಇಟ್ಟುಕೊಂಡರೂ ಆ ನೋವು ಬಹುಬೇಗ ಶಮನವಾಗುತ್ತದೆ.