alex Certify ʼತಲೆದಿಂಬುʼ ಇಲ್ಲದೇ ನಿದ್ರಿಸುವುದರಿಂದಾಗುತ್ತೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತಲೆದಿಂಬುʼ ಇಲ್ಲದೇ ನಿದ್ರಿಸುವುದರಿಂದಾಗುತ್ತೆ ಈ ಲಾಭ

Is it Better to Sleep Without a Pillow? - John Ryan By Designಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ಮಲಗುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಯಾವುವು ಅಂತ ನೋಡೋಣ.

ಮುಖದ ಚರ್ಮಕ್ಕೆ

ತಲೆದಿಂಬು ಇಟ್ಟುಕೊಂಡು ಮಲಗುವುದರಿಂದ ಚರ್ಮ ಸಡಿಲಗೊಳ್ಳುತ್ತದೆ. ಪರಿಣಾಮವಾಗಿ ಮುಖದ ಚರ್ಮ ಬೇಗನೇ ಸುಕ್ಕುಗಟ್ಟಿದಂತಾಗುತ್ತದೆ. ಹಾಗಾಗಿ ಮುಖದ ಸೌಂದರ್ಯದ ದೃಷ್ಟಿಯಿಂದ ತಲೆದಿಂಬು ಬೇಡ.

ಬೆನ್ನು ನೋವು

ಬೆನ್ನು ಅಥವಾ ಸೊಂಟ ನೋವಿದ್ದರೆ ವೈದ್ಯರು ತಲೆದಿಂಬು ಇಲ್ಲದೇ ಸಮತಟ್ಟಾದ ನೆಲದಲ್ಲಿ ಮಲಗಲು ಹೇಳುವುದು ನೋಡಿದ್ದೇವೆ. ಸಮತಟ್ಟಾದ ನೆಲದಲ್ಲಿ ಮಲಗುವುದರಿಂದ ನಮ್ಮ ಬೆನ್ನುಲುಬಿಗೆ ವಿಶ್ರಾಂತಿ ಸಿಗುತ್ತದೆ.

ಉತ್ತಮ ನಿದ್ರೆ

ತಲೆದಿಂಬು ಇಲ್ಲದೇ ಮಲಗುವುದರಿಂದ ಸುಖ ನಿದ್ರೆ ನಿಮ್ಮದಾಗುತ್ತದೆ. ಅಧ್ಯಯನವೊಂದರಿಂದಲೂ ಇದು ದೃಢಪಟ್ಟಿದೆ.

ಜ್ಞಾಪಕ ಶಕ್ತಿ

ತಲೆದಿಂಬು ಇಲ್ಲದೇ ಮಲಗುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಎತ್ತರದ ತಲೆದಿಂಬು ಇಟ್ಟುಕೊಂಡು ಮಲಗುವಾಗ ಸರಿಯಾದ ನಿದ್ರೆ ಬರದು. ಸುಖ ನಿದ್ರೆಯಿಲ್ಲದೇ ಜ್ಞಾಪಕ ಶಕ್ತಿ ಚೆನ್ನಾಗಿ ಆಗದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...