alex Certify ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ತರಕಾರಿ ಇದು; ಅದರಲ್ಲೇನಿದೆ ವಿಶೇಷತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ತರಕಾರಿ ಇದು; ಅದರಲ್ಲೇನಿದೆ ವಿಶೇಷತೆ ಗೊತ್ತಾ….?

ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್‌ ಎಲ್ಲರಿಗೂ ಮಾದರಿಯಾಗುವಂತಿದೆ. ಯಾಕಂದ್ರೆ ವರ್ಷಕ್ಕೆ ಒಂದೇ ಒಂದು ರಜೆಯನ್ನೂ ತೆಗೆದುಕೊಳ್ಳದೆ ಕರ್ತವ್ಯ ನಿರ್ವಹಿಸ್ತಾರೆ ಮೋದಿ. ಅವರ ಆರೋಗ್ಯದ ಗುಟ್ಟು ವ್ಯಾಯಾಮ ಮತ್ತು ಅವರು ಸೇವಿಸುವ ಆಹಾರದಲ್ಲಿದೆ. ಪ್ರಧಾನಿ ಮೋದಿ ಅಪ್ಪಟ ಸಸ್ಯಾಹಾರಿ. ಎಲ್ಲಾ ತರಕಾರಿಗಳ ಪೈಕಿ ನುಗ್ಗೇಕಾಯಿ ಮೋದಿ ಅವರಿಗೆ ಬಹಳ ಪ್ರಿಯ.

ತಮ್ಮ ದಿನನಿತ್ಯದ ಆಹಾರದಲ್ಲಿ ಮೋದಿ ನುಗ್ಗೇಕಾಯಿಯ ತಿನಿಸುಗಳನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ನುಗ್ಗೇಕಾಯಿಯ ಪರೋಟವಂತೂ ಮೋದಿ ಅವರಿಗೆ ಬಹಳ ಇಷ್ಟವಂತೆ. ವಾರಕ್ಕೆ ಒಮ್ಮೆಯಾದರೂ ಅವರು ಇದನ್ನು ಸೇವಿಸ್ತಾರೆ. ಯಾಕಂದ್ರೆ ನುಗ್ಗೇಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ.

ನುಗ್ಗೇಕಾಯಿಯಲ್ಲಿ ಅನೇಕ ಬಗೆಯ ಔಷಧೀಯ ಗುಣಗಳಿವೆ. ಇದು ಪ್ರತಿಜೀವಕ, ನೋವು ನಿವಾರಕ, ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಎಂಟಿಕಾನ್ಸರ್, ಎಂಟಿಡಯಾಬಿಟಿಕ್, ಎಂಟಿವೈರಲ್, ಎಂಟಿಫಂಗಲ್ ಮತ್ತು ಎಂಟಿಏಜಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ ವಿಟಮಿನ್ ಎ, ವಿಟಮಿನ್ ಬಿ1 (ಥಯಾಮಿನ್), ಬಿ2 (ರೈಬೋಫ್ಲಾವಿನ್), ಬಿ3 (ನಿಯಾಸಿನ್), ಬಿ-6 ಫೋಲೇಟ್, ಆಸ್ಕೋರ್ಬಿಕ್ ಆಮ್ಲ (ವಿಟಮಿನ್ ಸಿ), ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತುವು ಇದರಲ್ಲಿ ಕಂಡುಬರುತ್ತದೆ. ಹಾಗಾಗಿ ಅನೇಕ ರೋಗಗಳನ್ನು ಇದು ದೂರವಿಡುತ್ತದೆ.

ನುಗ್ಗೇಗಿಡದ ಎಲ್ಲಾ ಭಾಗಗಳು ಕೂಡ ಪ್ರಯೋಜನಕಾರಿ. ಇದರ ಎಲೆಗಳನ್ನು ಅಡುಗೆಯಲ್ಲಿ ತಪ್ಪದೇ ಬಳಸಿ. ನುಗ್ಗೆ ಕಾಳುಗಳನ್ನು ಸೂಪ್ ಮತ್ತು ಪಲ್ಯಗಳಿಗೆ ಬಳಸಬಹುದು. ನುಗ್ಗೇ ಎಲೆಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಅದನ್ನು ಕೂಡ ಬಳಸಬಹುದು. ಇದಲ್ಲದೆ ನುಗ್ಗೇಕಾಯಿಯಲ್ಲಿರುವ ಕಾಳುಗಳನ್ನು ಕುದಿಸಿ ಅದರ ಸೂಪ್ ಕುಡಿಯುವುದರಿಂದ ಸಂಧಿವಾತದ ನೋವಿನಿಂದ ಪರಿಹಾರ ಸಿಗುತ್ತದೆ.

ನುಗ್ಗೇಕಾಯಿ ನಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಉತ್ತಮಗೊಳಿಸುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳನ್ನು ನಿರ್ವಿಷಗೊಳಿಸುತ್ತದೆ. ಇದಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚರ್ಮ ರೋಗಗಳನ್ನು ಗುಣಪಡಿಸುತ್ತದೆ. ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಥೈರಾಯ್ಡ್ ರೋಗಿಗಳಿಗೂ ಇದು ತುಂಬಾ ಪ್ರಯೋಜನಕಾರಿ.

ಆದರೆ ನುಗ್ಗೇಕಾಯಿ ಉಷ್ಣಪರಿಣಾಮಗಳನ್ನು ಹೊಂದಿದೆ. ಆದ್ದರಿಂದ ಶಾಖದ ಸಮಸ್ಯೆಗಳು (ಆಮ್ಲತೆ, ರಕ್ತಸ್ರಾವ, ಪೈಲ್ಸ್, ಭಾರೀ ಮುಟ್ಟಿನ ರಕ್ತಸ್ರಾವ, ಮೊಡವೆ) ಇರುವವರು ಈ ಆಹಾರವನ್ನು ಸೇವಿಸಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...