ಅಹಮದಾಬಾದ್: ಕೇವಲ 31 ಪೈಸೆ ಸಾಲ ಬಾಕಿ ಇರುವ ಕಾರಣ ರೈತರಿಗೆ ನೋ ಡ್ಯೂಸ್ ಸರ್ಟಿಫಿಕೇಸ್ ನೀಡದ ರಾಷ್ಟ್ರೀಕೃತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಭಾರ್ಗವ್ ಕರಿಯಾ, ಹೈಕೋರ್ಟ್‌ನಿಂದ ಪರಿಹಾರ ಕೋರಿ ಇಬ್ಬರು ರೈತರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಭೂ ವ್ಯವಹಾರವನ್ನು ತೆರವುಗೊಳಿಸಲು ಅಗತ್ಯವಾದ ಬಾಕಿ ಪ್ರಮಾಣಪತ್ರವನ್ನು ಬ್ಯಾಂಕ್ ತಡೆಹಿಡಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
“ಇದು ಕಿರುಕುಳವಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಮೂರ್ತಿಗಳು, ವಿಷಯದ ವಿಚಾರಣೆ ವೇಳೆ ಹೇಳಿದ್ದು, ರಾಷ್ಟ್ರೀಕೃತ ಬ್ಯಾಂಕ್ ಕೇವಲ 31 ಪೈಸೆ ಕಾರಣ ನೋ ಡ್ಯೂಸ್ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂದು ಹೇಳಿದ್ದು, ತುಂಬಾ ಅತಿಯಾಯಿತು ಎಂದು ಖಾರವಾಗಿಯೇ ನುಡಿದಿದ್ದಾರೆ.
PSI ನೇಮಕಾತಿ ಹಗರಣ: ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರು, ಬಂಧಿತರ ಸಂಖ್ಯೆ 17 ಕ್ಕೆ ಏರಿಕೆ
2020 ರಲ್ಲಿ ಅಹಮದಾಬಾದ್ ನಗರದ ಸಮೀಪದ ಖೋರಾಜ್ ಗ್ರಾಮದಲ್ಲಿ ರೈತ ಶಾಮ್ಜಿಭಾಯಿ ಮತ್ತು ಅವರ ಕುಟುಂಬದಿಂದ ತುಂಡು ಭೂಮಿಯನ್ನು ಖರೀದಿಸಿದ ಅರ್ಜಿದಾರರಾದ ರಾಕೇಶ್ ವರ್ಮಾ ಮತ್ತು ಮನೋಜ್ ವರ್ಮಾ ಅವರ ಮನವಿಗೆ ಪ್ರತಿಕ್ರಿಯಿಸಿದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಕಿಡಿಕಾರಿದ್ದಾರೆ.
ಎಸ್‌ಬಿಐನಿಂದ ಪಡೆದಿದ್ದ 3 ಲಕ್ಷ ರೂ.ಗಳ ಬೆಳೆ ಸಾಲವನ್ನು ಮರುಪಾವತಿಸುವ ಮೊದಲು ಶ್ಯಾಮ್‌ಜಿಭಾಯಿ ಅರ್ಜಿದಾರರಿಗೆ ಭೂಮಿಯನ್ನು ಮಾರಾಟ ಮಾಡಿದ್ದರಿಂದ, ಅರ್ಜಿದಾರರು (ಹೊಸ ಜಮೀನಿನ ಮಾಲೀಕರು) ತಮ್ಮ ಹೆಸರನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸಲು ಸಾಧ್ಯವಾಗಲಿಲ್ಲ. ನಂತರ ರೈತ (ಶಾಮ್ಜಿಭಾಯಿ) ಸಂಪೂರ್ಣ ಹಣವನ್ನು ಬ್ಯಾಂಕಿಗೆ ಮರುಪಾವತಿಸಿದ್ದರೂ, ಕೆಲವು ಕಾರಣಗಳಿಂದ ಎಸ್‌ಬಿಐ ಇನ್ನೂ ನೋ-ಡ್ಯೂಸ್ ಪ್ರಮಾಣಪತ್ರವನ್ನು ನೀಡಲಿಲ್ಲ, ಇದನ್ನು ಅನುಸರಿಸಿ ಹೊಸ ಮಾಲೀಕರು ಎರಡು ವರ್ಷಗಳ ಹಿಂದೆ ಹೈಕೋರ್ಟ್‌ಗೆ ತೆರಳಿದರು.
ಬುಧವಾರದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ನ್ಯಾಯಾಲಯದಲ್ಲಿ ಬಾಕಿ ಇಲ್ಲದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಸೂಚಿಸಿದರು. ಕೋರ್ಟ್‌ಗೆ ಉತ್ತರಿಸಿದ ಎಸ್‌ಬಿಐ ಪರ ವಕೀಲ ಆನಂದ್ ಗೋಗಿಯಾ, 31 ಪೈಸೆ ಬಾಕಿ ಇರುವ ಕಾರಣ ಸಾಧ್ಯವಾಗಿಲ್ಲ ಎಂದು ಹೇಳಿದರು. ಇದಕ್ಕೆ ನ್ಯಾಯಮೂರ್ತಿಗಳು 50 ಪೈಸೆಗಿಂತ ಕಡಿಮೆ ಇರುವ ಯಾವುದನ್ನಾದರೂ ನಿರ್ಲಕ್ಷಿಸಬೇಕು ಮತ್ತು ಪ್ರಮಾಣಪತ್ರವನ್ನು ನೀಡಬೇಕು ಏಕೆಂದರೆ ಮೂಲ ಸಾಲಗಾರ ಈಗಾಗಲೇ ಬೆಳೆ ಸಾಲದ ಸಂಪೂರ್ಣ ಬಾಕಿಯನ್ನು ಪಾವತಿಸಿದ್ದಾರೆ ಎಂದು ಹೇಳಿದರು.