ಅಲ್ಟ್ರಾ ಐಷಾರಾಮಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು. ಇದನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಡಬಲ್ ಡೋರ್‌ನ ಈ ಎಲೆಕ್ಟ್ರಿಕ್ ಕೂಪ್ ಬೆಲೆ ಕೇಳಿದ್ರೆ ಕಾರು ಪ್ರಿಯರು ಶಾಕ್ ಆಗೋದು ಪಕ್ಕಾ.
ರೋಲ್ಸ್ ರಾಯ್ಸ್ ಸ್ಪೆಕ್ಟರ್‌ನ ಎಲೆಕ್ಟ್ರಿಕ್ ಕಾರಿನ ಬೆಲೆ ಅಂದಾಜು 7.5 ಕೋಟಿ ರೂಪಾಯಿ. ಇದು 102kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಪ್ರತಿ ಆಕ್ಸಲ್‌ನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಳವಡಿಸಲಾಗಿದೆ. 585bhp ಸಂಯೋಜಿತ ಶಕ್ತಿ ಮತ್ತು 900Nm ಟಾರ್ಕ್ ಅನ್ನು ಈ ಕಾರು ಉತ್ಪಾದಿಸಬಲ್ಲದು.
ಕಾರಿನ ಬ್ಯಾಟರಿಯನ್ನು 195 kW ಚಾರ್ಜರ್‌ನೊಂದಿಗೆ ಕೇವಲ 34 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಅದೇ ಸಮಯದಲ್ಲಿ 50kW DC ಚಾರ್ಜರ್‌ನೊಂದಿಗೆ ಇದನ್ನು 95 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.
ರೋಲ್ಸ್ ರಾಯ್ಸ್ ಕಂಪನಿಯ ಪ್ರಕಾರ ಈ ಕಾರು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ 530 ಕಿಮೀ ದೂರ ಓಡಬಲ್ಲದು. 4.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ 100 ಕಿಮೀ ವೇಗವನ್ನು ಸಾಧಿಸುತ್ತದೆ.
ಸ್ಪೆಕ್ಟರ್ ಕಾರಿನ ತೂಕ 2,890 ಕೆಜಿ. ಇದನ್ನು ರೋಲ್ಸ್ ರಾಯ್ಸ್‌ನ ಆಲ್-ಅಲ್ಯೂಮಿನಿಯಂ ಸ್ಪೇಸ್‌ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ವಿಶಾಲವಾದ ಮುಂಭಾಗದ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಜೊತೆಗೆ ಅಲ್ಟ್ರಾ-ಸ್ಲಿಮ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು , ಏರೋ-ಟ್ಯೂನ್ಡ್ ಸ್ಪಿರಿಟ್ ಆಫ್ ಎಕ್ಸ್‌ಟಸಿ, ಬೋಲ್ಡ್ ಶೋಲ್ಡರ್ ಲೈನ್‌ಗಳು ಮತ್ತು ಸ್ಲೋಪಿಂಗ್ ರೂಲೈನ್‌ಗಳು ಈ ಕಾರಿನ ವಿಶೇಷತೆಗಳಾಗಿವೆ.
ಇದು 4-ವೀಲ್ ಸ್ಟೇರಿಂಗ್ ಮತ್ತು ಸಕ್ರಿಯ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಸ್ಪೆಕ್ಟರ್‌ನ ವಿನ್ಯಾಸವು ರೋಲ್ಸ್ ರಾಯ್ಸ್‌ನ ಟೈಮ್‌ಲೆಸ್ ಬ್ಯೂಟಿಯನ್ನು ಪ್ರತಿಬಿಂಬಿಸುತ್ತದೆ. 23 ಇಂಚಿನ ಏರೋ-ಟ್ಯೂನ್ಡ್ ಚಕ್ರಗಳನ್ನು ಕಾರಿಗೆ ಅಳವಡಿಸಲಾಗಿದೆ.