ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಮಾತು ಈಗ ಬಹುತೇಕ ಸುಳ್ಳಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳೋದು, ಪತಿ-ಪತ್ನಿ ಬೇರೆಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಗಾತಿಗಳು ತಮ್ಮ ಸಂಬಂಧವನ್ನು ಗಂಭೀರವಾಗಿ ನಿರ್ವಹಣೆ ಮಾಡೋದು ಅನಿವಾರ್ಯವಾಗಿಬಿಟ್ಟಿದೆ.
ಒಮ್ಮೊಮ್ಮೆ ಪತಿ ಬಹಳ ಬದಲಾದಂತೆ, ತನ್ನ ಮೇಲೆ ಪ್ರೀತಿ ಕಡಿಮೆಯಾದಂತೆ ಪತ್ನಿಗೆ ಭಾಸವಾಗುವುದುಂಟು. ನಿಜವಾಗಿಯೂ ಗಂಡನಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗಿದ್ಯಾ ಅನ್ನೋದನ್ನು ಪತ್ತೆ ಮಾಡುವ ಕೆಲವೊಂದು ಸಂಗತಿಗಳು ಇಲ್ಲಿವೆ.
ಪತಿ ನಿಮ್ಮಿಂದ ದೂರವೇ ಇರಲು ಇಚ್ಛಿಸಿದ್ರೆ, ಮೊದಲಿನಂತೆ ನಿಮ್ಮ ಸಂಪರ್ಕವನ್ನು ಇಷ್ಟಪಡದೇ ಇದ್ದರೆ ಖಂಡಿತವಾಗಿಯೂ ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂಬುದರ ಸೂಚನೆ ಅದು. ಕೆಲಸದ ಒತ್ತಡ ಇದಕ್ಕೆ ಕಾರಣವಿರಬಹುದು, ಅಥವಾ ನಿಮಗೆ ಆತ ಮೋಸ ಮಾಡುತ್ತಿರಲೂಬಹುದು.
ಸಣ್ಣ ಪುಟ್ಟ ಜಗಳದ ಬಳಿಕ ಸಂಗಾತಿಯ ಜೊತೆಗೆ ಮಾತು ಬಿಡೋದು ಕಾಮನ್, ಆದ್ರೆ ರಾತ್ರಿ ಒಂದೇ ಹಾಸಿಗೆಯಲ್ಲಿ ಮಲಗಲು ಪತಿ ಹಿಂದೇಟು ಹಾಕಿದ್ರೆ ನೀವದನ್ನ ಗಂಭೀರವಾಗಿ ಪರಿಗಣಿಸಿ. ನಿಮ್ಮ ಮಾತನ್ನು ನಿರ್ಲಕ್ಷಿಸುವುದು ಅಥವಾ ಅದರಲ್ಲಿ ಆಸಕ್ತಿಯೇ ಇಲ್ಲದಂತೆ ಪತಿ ತೋರ್ಪಡಿಸಿದ್ರೆ ಆತನ ಹೃದಯದಲ್ಲಿ ಇನ್ಯಾರಿಗೋ ಜಾಗ ಕೊಟ್ಟಿರೋ ಸಾಧ್ಯತೆ ಇರುತ್ತದೆ.
ಇದು ಕೂಡ ಪತಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಂಡಿರುವುದರ ಲಕ್ಷಣ. ಕೆಲವು ಗಂಡಸರಿಗೆ ಪತ್ನಿಯನ್ನು ಹೊಗಳುವ ಅಭ್ಯಾಸ ಕಡಿಮೆ. ಆಕೆಯ ಅಂದ ಚಂದದ ಬಗ್ಗೆ ಮಾತನಾಡುವುದೇ ಇಲ್ಲ. ಆದ್ರೆ ರುಚಿಯಾಗಿ ಅಡುಗೆ ಮಾಡಿದಾಗಲೂ ಅದನ್ನು ಮೆಚ್ಚಿಕೊಳ್ಳದೇ ಇದ್ದಲ್ಲಿ ಪತ್ನಿ ಅಲರ್ಟ್ ಆಗಲೇಬೇಕು.
ಪತಿ-ಪತ್ನಿ ಜೊತೆಯಾಗಿ ಸಮಯ ಕಳೆಯೋದು ಅತ್ಯಂತ ಅವಶ್ಯಕ, ಇದ್ರಿಂದ ಪ್ರೀತಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಆದ್ರೆ ಪತಿ ನಿಮ್ಮೊಂದಿಗಿನ ಸೆಕ್ಸ್ ಲೈಫ್ ಕೊನೆಗಾಣಿಸಲು ಹೆಚ್ಚಿನ ಆಸಕ್ತಿ ತೋರಿಸಿದ್ರೆ ಆತನಿಗೆ ಪ್ರೀತಿ ಕಡಿಮೆಯಾಗಿದೆ ಎಂಬುದರ ಸಂಕೇತ ಅದು.