
ನಿತ್ಯ ಕನ್ನಡಕ ಬಳಸುವವರ ಮೂಗಿನ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಹೋಗಲಾಡಿಸಲು ಮಳಿಗೆಗಳಲ್ಲಿ ಸಿಗುವ ಕ್ರೀಮ್ ಬಳಸುವ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಸೌತೆಕಾಯಿ ರಸದಿಂದ ಮುಖದ ಕಲೆಗಳನ್ನು ಹೊಡೆದೋಡಿಸಬಹುದು. ಕಣ್ಣಿನ ಕೆಳಭಾಗ ಕಪ್ಪಾಗುವುದನ್ನೂ ಇದು ದೂರಮಾಡುತ್ತದೆ. ಸೌತೆಕಾಯಿ ತುಂಡಿನಿಂದ ಕಣ್ಣಿನ ಕೆಳಭಾಗವನ್ನು ಉಜ್ಜುವುದರಿಂದಲೂ ಕಣ್ಣಿನ ಸಮಸ್ಯೆಯನ್ನು ದೂರಮಾಡಬಹುದು.
ನಿಮ್ಮ ಮನೆಯ ಅಂಗಳದಲ್ಲೇ ಬೆಳೆದ ಅಲೋವೇರಾದ ಜೆಲ್ ತೆಗೆದು ಕಲೆ ಇರುವ ಜಾಗಕ್ಕೆ ಮಸಾಜ್ ಮಾಡಿ. ಇದರಿಂದಲೂ ಕಲೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಬಾದಾಮಿ ಎಣ್ಣೆಯನ್ನು ತ್ವಚೆಯ ಹೊಳಪಿಗೆ ಹಲವು ರೀತಿಯಲ್ಲಿ ಬಳಸಬಹುದು. ಇದರಲ್ಲಿ ಕಲೆ ನಿವಾರಕ ಗುಣವಿದ್ದು ರಾತ್ರಿ ಮಲಗುವ ಮುನ್ನ ಇದರಿಂದ ಕಲೆ ಇರುವ ಜಾಗವನ್ನು ಮಸಾಜ್ ಮಾಡಿ, ಬೆಳಗೆದ್ದು ಮುಖ ತೊಳೆದರೆ ಸಾಕು.