alex Certify ಹೀಗಿರಲಿ ಚಳಿಗಾಲದಲ್ಲಿ ಸೌಂದರ್ಯ ಕಳೆದುಕೊಳ್ಳುವ ತುಟಿಗಳ ಆರೈಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಚಳಿಗಾಲದಲ್ಲಿ ಸೌಂದರ್ಯ ಕಳೆದುಕೊಳ್ಳುವ ತುಟಿಗಳ ಆರೈಕೆ….!

ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಮುಖದ ಸೌಂದರ್ಯ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವವನ್ನು ತೋರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ ತುಟಿಗಳಿಂದ ರಕ್ತ ಬರುವುದುಂಟು.

ಚಳಿಗಾಲದಲ್ಲಿ ತುಟಿಗಳ ಆರೈಕೆ ಬಹಳ ಮುಖ್ಯ. ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುತ್ತ ಬಂದಲ್ಲಿ ಚಳಿಗಾಲದಲ್ಲಿಯೂ ಸುಂದರ ತುಟಿಯನ್ನು ನಮ್ಮದಾಗಿಸಿಕೊಳ್ಳಬಹುದು.

ಹವಾಮಾನ ಯಾವುದೇ ಇರಲಿ ತುಟಿಗಳು ಮೃದುವಾಗಿ ಸುಂದರವಾಗಿ ಕಾಣಬೇಕೆಂದಾದಲ್ಲಿ ಸಾಕಷ್ಟು ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಲ್ಲಿ ತುಟಿಗಳು ತೇವಾಂಶ ಕಳೆದುಕೊಳ್ಳುತ್ತವೆ. ಇದ್ರಿಂದ ತುಟಿ ಒಡೆಯುತ್ತದೆ. ಹಾಗಾಗಿ ಚಳಿಗಾಲದಲ್ಲಿಯೂ ಹೆಚ್ಚೆಚ್ಚು ನೀರು ಕುಡಿದಲ್ಲಿ ತುಟಿಯ ರಕ್ಷಣೆ ಸುಲಭವಾಗುತ್ತದೆ.

ರಾತ್ರಿ ಜೇನು ತುಪ್ಪವನ್ನು ತುಟಿಗಳಿಗೆ ಹಚ್ಚಿ ಮಲಗುವುದ್ರಿಂದ ತುಟಿಗಳು ಮೃದುವಾಗುತ್ತವೆ. ರಾತ್ರಿ ತುಟಿಗಳಿಗೆ ಜೇನುತುಪ್ಪ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಬೇಕು.

ಗ್ಲಿಸರಿನ್ ಹಾಗೂ ರೋಸ್ ವಾಟರನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ರಾತ್ರಿ ತುಟಿಗೆ ಹಚ್ಚುತ್ತ ಬಂದಲ್ಲಿ ಅತಿ ಬೇಗ ತುಟಿ ಉರಿ, ಒಡಕು ಸಮಸ್ಯೆ ಕಡಿಮೆಯಾಗುತ್ತದೆ.

ಬೆರಳಿನಲ್ಲಿ ಸ್ವಲ್ಪ ಆಕಳ ತುಪ್ಪವನ್ನು ತೆಗೆದುಕೊಂಡು ತುಟಿಗಳಿಗೆ ಮಸಾಜ್ ಮಾಡಿ. ತುಟಿಗಳ ರಕ್ತ ಸಂಚಾರ ಸುಲಭವಾಗಿ ಒಡಕು ನಿವಾರಣೆಯಾಗುತ್ತದೆ.

ರಾತ್ರಿ ಮಲಗುವಾಗ ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕಿಕೊಂಡಲ್ಲಿ ತುಟಿ ಒಡಕಿನ ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...