ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶೀಘ್ರ ಫಲ ನೀಡುವ ದೇವರೆಂದು ಪರಿಗಣಿಸಲಾಗಿದೆ. ಚಿರಂಜೀವಿ ದೇವರಾದ ಹನುಮಂತ ಕಲಿಯುಗದಲ್ಲಿಯೂ ಇದ್ದಾನೆಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು ಶ್ರದ್ಧೆಯಿಂದ ಹನುಮಂತನ ಆರಾಧನೆ ಮಾಡ್ತಾರೆ.
ಹಿಂದೂ ಧರ್ಮದಲ್ಲಿ ದೇವಾನುದೇವತೆಗಳನ್ನು ಪೂಜಿಸಲು ಮಹಿಳೆ ಹಾಗೂ ಪುರುಷರಿಗೆ ಸಮಾನ ಸ್ಥಾನ ನೀಡಲಾಗಿದೆ. ಆದ್ರೆ ಹನುಮಂತನ ಪೂಜೆಯಲ್ಲಿ ಮಾತ್ರ ಮಹಿಳೆಗೆ ಹೆಚ್ಚಿನ ಅವಕಾಶ ನೀಡಿಲ್ಲ. ಕೆಲವೊಂದು ಪೂಜೆಗಳನ್ನು ಹಾಗೂ ಆರಾಧನೆಯನ್ನು ಮಹಿಳೆಯರು ಮಾಡಬಾರದು.
ಹನುಮಂತ ಪ್ರತಿ ಮಹಿಳೆಯರನ್ನೂ ತಾಯಿಯೆಂದು ಪರಿಗಣಿಸಿದ್ದಾನೆ. ದೇವಿ ಸೀತೆ ಸೇರಿದಂತೆ ಪ್ರತಿ ಮಹಿಳೆಯನ್ನೂ ಆತ ತಾಯಿ ಸ್ಥಾನದಲ್ಲಿಟ್ಟು ನೋಡ್ತಾನೆ. ಹಾಗಾಗಿ ಮಹಿಳೆ ತನ್ನ ಮುಂದೆ ತಲೆಬಾಗುವುದನ್ನು ಶುಭವೆಂದು ಭಾವಿಸುವುದಿಲ್ಲ.
ತುಂಬಾ ಹೊತ್ತು ಮಹಿಳೆಯಾದವಳು ಭಗವಂತ ಹನುಮಂತನ ಉಪಾಸನೆ ಮಾಡಬಾರದು.
ಭಗವಂತ ಹನುಮಂತನಿಗೆ ಅರ್ಘ್ಯವನ್ನು ಅರ್ಪಿಸಬಾರದು.
ಪೂಜೆ ಮಾಡುವ ವೇಳೆ ಅಥವಾ ಯಾವುದೇ ಸಮಯದಲ್ಲಾದ್ರೂ ಹನುಮಂತನಿಗೆ ಪಂಚಾಮೃತಾಭಿಷೇಕ ಮಾಡಬಾರದು.