ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಸೌಂದರ್ಯ ಅಂದರೆ ಬರೀ ಮುಖ, ಮಾತ್ರವಲ್ಲ ಕಾಲು ಮತ್ತು ಪಾದಗಳನ್ನು ಕೂಡ ಸುಂದರವಾಗಿ ಕಾಣುವಂತೆ ಇಟ್ಟುಕೊಳ್ಳಬೇಕು. ಹಾಗಾಗಿ ಈ ಟಿಪ್ಸ್ ಅನ್ನು ಅನುಸರಿಸಿ.
*ಪಾದಗಳನ್ನು ಸ್ಕ್ರಬ್ ಮಾಡಿ. ಎಳ್ಳೆಣ್ಣೆ, ಆಲಿವ್ ಆಯಿಲ್, ತೆಂಗಿನೆಣ್ಣೆ ಇವುಗಳಲ್ಲಿ ಯಾವುದಾರೊಂದು ಎಣ್ಣೆಯನ್ನು ಬಳಸಿ 15 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಬಳಿಕ ವಾಶ್ ಮಾಡಿ ನಿಂಬೆ ರಸ, ಜೇನುತುಪ್ಪ, ರೋಸ್ ವಾಟರ್ ಮಿಕ್ಸ್ ಮಾಡಿ ಕಾಲುಗಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡಿ.
*ಉಗುರಗಳ ಆರೈಕೆ ಮಾಡಿ. ಉಗುರುಗಳ ನೈಲ್ ಪಾಲಿಶ್ ತೆಗೆದು ಎಣ್ಣೆ ಮಸಾಜ್ ಮಾಡಿ. ಹಾಗೇ ಪಾದಗಳಲ್ಲಿ ಬಿರುಕು ಇದ್ದರೆ ಅದನ್ನು ನಿವಾರಿಸಲು ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ಶಾಂಪುವನ್ನು ಮಿಕ್ಸ್ ಮಾಡಿ ಪಾದಗಳನ್ನು 20 ನಿಮಿಷ ನೆನೆಸಿ. ಬಳಿಕ ಪಾದಗಳನ್ನು ನಿಧಾನವಾಗಿ ಬ್ರಶ್ ನಿಂದ ಉಜ್ಜಿ. ಇದರಿಂದ ಸತ್ತ ಚರ್ಮಕೋಶಗಳು ನಿವಾರಣೆಯಾಗುತ್ತದೆ. ರಾತ್ರಿ ಕಾಲಿಗೆ ಸಾಕ್ಸ್ ಧರಿಸಿ.