
ಮಳೆಗಾಲದಲ್ಲಿ ದೇಹಕ್ಕೆ ಹೆಚ್ಚಿನ ಆರೈಕೆಯೂ ಬೇಕಾಗುತ್ತದೆ. ನಾವು ನಿತ್ಯ ಬಳಸುವ ವಸ್ತುಗಳಲ್ಲೇ ಇದಕ್ಕೆ ಪರಿಹಾರವಿದೆ. ಮಳೆಗಾಲದಲ್ಲಿ ಫೇಶಿಯಲ್, ರಾಸಾಯನಿಕವಿರುವ ಕ್ರೀಮ್ ಗಳ ಬಳಕೆ ಆದಷ್ಟು ಕಡಿಮೆ ಮಾಡಿ. ದೇಹಕ್ಕೆ ಸಾಕಷ್ಟು ನೀರಿನಂಶ ಸಿಗದೆ ಇದ್ದರೆ ಮುಖದ ಹಾಗೂ ದೇಹದ ಸೂಕ್ಷ್ಮ ಭಾಗಗಳ ತ್ವಚೆ ಒಣಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ.
ಮುಳ್ಳುಸೌತೆ ಕಾಯಿಯನ್ನು ನುಣ್ಣಗೆ ರುಬ್ಬಿ ಮುಖಕ್ಕೆ ಫೇಸ್ ಪ್ಯಾಕ್ ನಂತೆ ಹಾಕಿ. ಇದರಿಂದ ಮುಖ ಫ್ರೆಶ್ ಅಗಿ ಇರುತ್ತದೆ. ಸೌತೆ ಕಾಯಿಯನ್ನು ತೆಳ್ಳಗೆ ಕತ್ತರಿಸಿ ಮುಖಕ್ಕೆ ತಿಕ್ಕಿಕೊಳ್ಳಬಹುದು.
ಅಲೊವೆರಾ ಜೆಲ್ ಬಳಸುವುದು ಮಳೆಗಾಲ – ಚಳಿಗಾಲದಲ್ಲಿ ಅತ್ಯುತ್ತಮ. ಅಂಗಡಿಯಲ್ಲಿ ಇದರ ಜೆಲ್ ಕೂಡಾ ಸಿಗುತ್ತದೆ. ಇಲ್ಲವಾದರೆ ಅಲೊವೆರಾ ಕತ್ತರಿಸಿ ಜೆಲ್ ಅನ್ನು ಮುಖ, ಕೈ ಕಾಲಿಗೆ ಹಚ್ಚಬಹುದು.
ಒಣ ಚರ್ಮದವರು ವಾರಕ್ಕೊಮ್ಮೆ ಮುಖಕ್ಕೆ ಬೆಣ್ಣೆ ಮಸಾಜ್ ಮಾಡಿ. ಇದರಿಂದ ಮಾಯಿಶ್ಚರೈಸರ್ ಸಿಕ್ಕಂತಾಗುತ್ತದೆ. ವಾರಕ್ಕೆ ಎರಡು ಬಾರಿ ಮೊಸರಿಗೆ ಲಿಂಬೆ ರಸ ಬೆರೆಸಿ ಹಚ್ಚಿಕೊಳ್ಳುವುದೂ ಅತ್ಯುತ್ತಮ.