alex Certify ದೇಹ ಅಂಟಿಕೊಂಡಿದ್ದರೂ ಗೌಪ್ಯತೆ ಕಾಪಾಡಿಕೊಂಡು ಮತ ಚಲಾಯಿಸಿದ ಅವಳಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹ ಅಂಟಿಕೊಂಡಿದ್ದರೂ ಗೌಪ್ಯತೆ ಕಾಪಾಡಿಕೊಂಡು ಮತ ಚಲಾಯಿಸಿದ ಅವಳಿಗಳು…!

ಭಾರತದಲ್ಲಿ ನಡೆಯುವ ಚುನಾವಣೆ ಒಂದು ರೀತಿ ವೈಶಿಷ್ಟ್ಯ ತುಂಬಿದ ಹಬ್ಬ ಅಂದ್ರೆ ತಪ್ಪಾಗಲ್ಲ. ಅಂಗವಿಕಲರು, ಹಣ್ಣಣ್ಣು ಮುದುಕರು ಮತಗಟ್ಟೆಗೆ ಬಂದು ತಮ್ಮ ಕರ್ತವ್ಯ ನಿರ್ವಹಿಸಿರುವುದಕ್ಕೆ ನಾವೆಲ್ಲರೂ ಹಲವು ವರ್ಷಗಳಿಂದ ಸಾಕ್ಷಿಯಾಗಿದ್ದೇವೆ. ಇಂದು ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ದೇಹಕ್ಕೆ ಅಂಟಿಕೊಂಡಿರುವ ಅವಳಿಗಳು ತಮ್ಮ ಮತ ಚಲಾಯಿಸಿದ್ದಾರೆ.

ಕಳೆದ ವರ್ಷ ಸರ್ಕಾರಿ ನೌಕರಿ ಪಡೆದು ಪ್ರಸಿದ್ಧರಾಗಿರುವ ಅವಳಿಗಳಾದ ಸೋನಾ ಮತ್ತು ಮೋನಾ ಅಮೃತಸರದಲ್ಲಿ ಮತ ಚಲಾಯಿಸಿದ್ದಾರೆ. ಇಬ್ಬರ ದೇಹ ಅಂಟಿಕೊಂಡಿರುವುದರಿಂದ, ಅವರಿಬ್ಬರ ನಡುವೆ ಗೌಪ್ಯತೆ ಕಾಪಾಡಿಕೊಳ್ಳಲು ಚುನಾವಣಾಧಿಕಾರಿಗಳು ವಿಶೇಷ ಕಾಳಜಿ ವಹಿಸಿದ್ದರು. ಇಬ್ಬರಿಗೂ ಕನ್ನಡಕಗಳನ್ನ ನೀಡಿ, ವಿಶೇಷ ವ್ಯವಸ್ಥೆ ಮಾಡಿದ್ದರು ಎಂದು ವರದಿಯಾಗಿದೆ.

ಮಿಯಾಮಿ ಬೀಚ್‌ನಲ್ಲಿ ಹೆಲಿಕಾಪ್ಟರ್ ದುರಂತ…..!

ಇಬ್ಬರು ಅಂಟಿಕೊಂಡಿದ್ದರು ಇಬ್ಬರನ್ನ ಪ್ರತ್ಯೇಕ ಮತದಾರರು ಎಂದು ಗುರುತಿಸಲಾಗಿದೆ. ಇಂತಹ ಇಬ್ಬರು ಪ್ರತ್ಯೇಕ ಮತದಾರರ ನಡುವೆ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ಮತಗಟ್ಟೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದು ಬಹಳ ವಿಶಿಷ್ಟವಾದ ಪ್ರಕರಣವಾಗಿದೆ. ಹೀಗಾಗಿ ಸರಿಯಾದ ವಿಡಿಯೋಗ್ರಫಿ ಮಾಡುವಂತೆ ಚುನಾವಣಾ ಆಯೋಗ ಹೇಳಿದೆ. ಅವರು ಪಂಜಾಬ್ ರಾಜ್ಯದ ಐಕಾನ್ ವೋಟರ್ಸ್. ಮತದಾನದ ವೇಳೆ ಅವರಿಬ್ಬರ ನಡುವೆ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಚುನಾವಣಾ ಆಯೋಗದಿಂದ ಅವರಿಗೆ ಕನ್ನಡಕಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತೆಂದು ಪಿಆರ್‌ಒ ಗೌರವ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷ ಹದಿನೆಂಟನೇ ವಸಂತಕ್ಕೆ ಕಾಲಿಟ್ಟ ಇಬ್ಬರನ್ನು ಚುನಾವಣಾ ಆಯೋಗವು ಪ್ರತ್ಯೇಕ ಮತದಾರರೆಂದು ಪರಿಗಣಿಸಿ, ಇಬ್ಬರಿಗೂ ವೈಯಕ್ತಿಕ ಮತದಾನದ ಹಕ್ಕನ್ನು ನೀಡಲು ನಿರ್ಧರಿಸಿತು. ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜು ಅವರು ಸೋನಾ-ಮೋನಾಗೆ ಜನವರಿ ತಿಂಗಳಿನಲ್ಲಿ ಎರಡು ಪ್ರತ್ಯೇಕ ಚುನಾವಣಾ ಗುರುತಿನ ಚೀಟಿಗಳನ್ನು ಹಸ್ತಾಂತರಿಸಿದ್ದರು. ತಮ್ಮದಲ್ಲದ ತಪ್ಪಿಗೆ ಹುಟ್ಟಿದಾಕ್ಷಣ ಪೋಷಕರಿಂದ ದೂರ ತಳ್ಳಲ್ಪಟ್ಟ ವಿಶಿಷ್ಟ ಮಕ್ಕಳು ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...