ಮುಖದ ಮೇಲೆ ಅಲ್ಲಲ್ಲಿ ಮೂಡುವ ಬಿಳಿ ಕಲೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತವೆ. ಸೂಕ್ಷ್ಮ ತ್ವಚೆಯ ಕೆಲವರಿಗೆ ಇದು ತುರಿಕೆಯನ್ನುಂಟು ಮಾಡುತ್ತದೆ. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವು ಔಷಧಗಳ ಬಗ್ಗೆ ತಿಳಿಯೋಣ.
ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಬೇವಿನ ಎಣ್ಣೆಯನ್ನು ತ್ವಚೆಯ ಮೇಲೆ ಹಚ್ಚಿ. ಇದು ತುರಿಕೆಯನ್ನು ಕಡಿಮೆ ಮಾಡಿ ತ್ವಚೆಗೆ ಸಹಜ ಬಣ್ಣವನ್ನು ಮರುಕಳಿಸುತ್ತದೆ.
ಅಲೋವೇರಾದಲ್ಲೂ ಕಲೆ ನಿವಾರಕ ಗುಣವಿದೆ. ಇದು ತ್ವಚೆಯ ನೈಸರ್ಗಿಕ ಬಣ್ಣವನ್ನು ಹಿಡಿದಿಡುತ್ತದೆ. ನಿತ್ಯ ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಳಿಕ ಮುಖ ತೊಳೆದರೆ ಎರಡು ವಾರಗಳಲ್ಲಿ ನಿಮ್ಮ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.
ಟೀ ಟ್ರೀ ಎಣ್ಣೆ, ಜೇನುತುಪ್ಪ, ಮುಲ್ತಾನಿ ಮಿಟ್ಟಿ ಇವುಗಳನ್ನು ದಿನಕ್ಕೊಂದರಂತೆ ಹಚ್ಚುತ್ತಾ ಬಂದರೆ ಕಲೆ ದೂರವಾಗುತ್ತದೆ. ಇವುಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಿ ಕಾಂತಿಯುತಗೊಳಿಸುತ್ತವೆ.