alex Certify ಬೆರಗಾಗಿಸುತ್ತೆ ಪ್ರತಿ ಪೋಸ್ಟ್‌ ಗೆ ಈ ಟಿಕ್‌ ಟಾಕ್‌ ಸ್ಟಾರ್‌ ಗಳಿಸೋ ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಪ್ರತಿ ಪೋಸ್ಟ್‌ ಗೆ ಈ ಟಿಕ್‌ ಟಾಕ್‌ ಸ್ಟಾರ್‌ ಗಳಿಸೋ ಹಣ…!

ಸಾಮಾಜಿಕ ಮಾಧ್ಯಮವನ್ನು ಸ್ಕ್ರೋಲ್ ಮಾಡುವಾಗ, ಸೆನೆಗಲ್ ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಖಬಾನೆ ಲೇಮ್ ಅವರ ರೀಲ್‌ಗಳನ್ನು ಹಲವು ಬಾರಿ ನೋಡಿರಬಹುದು. ಖಾಬಿ ಲೇಮ್ ಎಂದು ಜನಪ್ರಿಯರಾಗಿ ಲೈಫ್ ಹ್ಯಾಕ್ ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಸಿದ್ಧವಾದ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದಾರೆ.

ಟಿಕ್‌ಟಾಕ್ ಖ್ಯಾತಿ ಮತ್ತು ನಂತರದ ಒಪ್ಪಂದಗಳಿಂದಾಗಿ ಈ ವರ್ಷ 10 ಮಿಲಿಯನ್ ಡಾಲರ್‌ ಗಳಿಸುವ ಹಾದಿಯಲ್ಲಿದ್ದಾರೆ ಎಂದು ಖಾಬಿಯ ಮ್ಯಾನೇಜರ್ ಅಲೆಸ್ಸಾಂಡ್ರೊ ರಿಗ್ಗಿಯೊ ಬಹಿರಂಗಪಡಿಸಿದ್ದಾರೆ.

ಅವರು ತಮ್ಮ ಪ್ರಸಿದ್ಧ “ಖಾಬಿ ಮೂವ್” ಗೆ ಹೆಸರುವಾಸಿಯಾಗಿದ್ದಾರೆ. ಕುತೂಹಲಕಾರಿಯಾಗಿ, 22 ವರ್ಷ ವಯಸ್ಸಿನ ಖಾಬಿ 200 ಮಿಲಿಯನ್ ಫಾಲೋಯರ್‌ ಗಳನ್ನು ಹೊಂದಿದ್ದಾರೆ.

ತಮ್ಮ ಮಿಲನ್ ಫ್ಯಾಶನ್ ವೀಕ್ ಶೋನಲ್ಲಿ ರಾಂಪ್‌ನಲ್ಲಿ ಹೆಜ್ಜೆ ಹಾಕಲು ಖಾಬಿಗೆ ಇತ್ತೀಚೆಗೆ ಹ್ಯೂಗೋ ಬಾಸ್ 450,000 ಡಾಲರ್ ಪಾವತಿಸಿದ್ದಾರೆ. ರ್ಯಾಂಪ್ ಕ್ಲಿಪ್ ಅನ್ನು ಅವರ ಟಿಕ್‌ಟಾಕ್ ಖಾತೆಗೆ ಪೋಸ್ಟ್ ಮಾಡಲು ಅವರನ್ನು ಕೇಳಲಾಗಿತ್ತು.

ಒಂದು ಟಿಕ್ ಟಾಕ್ ವೀಡಿಯೊಗಾಗಿ ಪ್ರಮುಖ ಹಾಲಿವುಡ್ ಸ್ಟುಡಿಯೊದಿಂದ ಅವರು 750,000 ಡಾಲರ್ ಗಳಿಸಿದ್ದಾರೆ ಎಂದು ಫಾರ್ಚೂನ್ ಬಹಿರಂಗಪಡಿಸಿದೆ‌.

ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಖಾಬಿಗೆ ತಿಳಿದಿಲ್ಲ. ಅವರು ಹಣದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಮ್ಯಾನೇಜರ್ ರಿಗ್ಗಿಯೊ ಹೇಳಿದ್ದಾರೆ. ನಾನು ಜನರನ್ನು ನಗಿಸಲು ಇಷ್ಟಪಡುತ್ತೇನೆ. ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ. ನಾನು ನನ್ನ ಕಂಪನಿಯನ್ನು ಪ್ರೀತಿಸುತ್ತೇನೆ ಎಂದು ಖಾಬಿ ಅಭಿಪ್ರಾಯವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...