
ನಟಿ ಊರ್ವಶಿ ಮತ್ತು ರಿಷಬ್ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಪುನಃ ಅವರು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಆಹಾರವಾಗಿದ್ದಾರೆ.
ನಟಿ ಊರ್ವಶಿ ರೌಟೇಲಾ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಹುಡುಕಿ ಆಸ್ಟ್ರೇಲಿಯಾಕ್ಕೆ ಹೊರಟಿದ್ದಾರೆಂದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಕೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವಿಮಾನದಲ್ಲಿದ್ದ ಫೋಟೋವನ್ನು ಹಂಚಿಕೊಂಡ ನಂತರ ಈ ಊಹಾಪೋಹಗಳು ಬಂದವು.
ಪೋಸ್ಟ್‌ನ ಶೀರ್ಷಿಕೆಯನ್ನು ಓದಿದ ಅನೇಕರು ಮೇಮ್‌ಗಳನ್ನು ಹಂಚಿಕೊಂಡು ಟ್ರೋಲ್ ಮಾಡಿದರು.
ಆಕೆ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದು, ಹಸಿರು ಬಣ್ಣದ ಲೆಹೆಂಗಾ ಧರಿಸಿರುವುದನ್ನು ಕಾಣಬಹುದು. “ಕೈಸೆ ಭೂಲಾ ದೂನ್ ಉಸ್ಕೊ. ಮೌತ್ ಇನ್ಸಾನ್ ಕೋ ಆತಿ ಹೈ, ಯಾದೋಂ ಕೋ ನಹೀ,” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಊರ್ವಶಿ ರೌಟೇಲಾ ಒಬ್ಬ ಮನೋರೋಗಿ. ಅವಳು ಮಾಡುತ್ತಿರುವುದು ತಮಾಷೆಯಲ್ಲ, ಕಿರುಕುಳ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಊರ್ವಶಿ ರೌಟೇಲಾ ಸಂದರ್ಶನವೊಂದರಲ್ಲಿ, ದೆಹಲಿಯಲ್ಲಿ ತನ್ನ ಚಿತ್ರೀಕರಣದ ಸಮಯದಲ್ಲಿ ತನ್ನನ್ನು ಭೇಟಿಯಾಗಲು ‘ಆರ್‌ಪಿ’ ರಾತ್ರಿಯಿಡೀ ಕಾಯುತ್ತಿದ್ದರು ಎಂದು ಹೇಳಿಕೊಂಡಾಗ ಈ ರೂಮರ್ ಪ್ರಾರಂಭವಾಯಿತು.
ಆರ್ಪಿ ಹೋಟೆಲ್ ಲಾಬಿಗೆ ಬಂದರು ಮತ್ತು ಭೇಟಿಯಾಗಲು ಬಯಸಿದ್ದರು. ಹತ್ತು ಗಂಟೆಗಳು ಕಳೆದವು ಮತ್ತು ನಾನು ನಿದ್ರೆಗೆ ಜಾರಿದೆ. ನಾನು ಎಚ್ಚರವಾದಾಗ ನಾನು 16-17 ಮಿಸ್ಡ್ ಕಾಲ್‌ಗಳನ್ನು ನೋಡಿದೆ ಮತ್ತು ಯಾರೋ ನನಗಾಗಿ ಕಾಯುತ್ತಿದ್ದಾರೆ ಮತ್ತು ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ನನಗೆ ತುಂಬಾ ಬೇಸರವಾಯಿತು. ನೀವು ಮುಂಬೈಗೆ ಬಂದಾಗ ನಾವು ಭೇಟಿಯಾಗುತ್ತೇವೆ ಎಂದು ನಾನು ಅವನಿಗೆ ಹೇಳಿದೆ. ನಾವು ಮುಂಬೈನಲ್ಲಿ ಭೇಟಿಯಾದೆವು ಎಂದು ಆಕೆ ಹೇಳಿದರು.
ಇದರ ಬೆನ್ನಲ್ಲೇ ರಿಷಬ್ ಪಂತ್ ನಟಿಯ ಹೆಸರು ಹೇಳದೆ ಪ್ರತಿಕ್ರಿಯಿಸಿದ್ದಾರೆ. ಕೇವಲ ಅಲ್ಪ ಜನಪ್ರಿಯತೆಗಾಗಿ ಮತ್ತು ಹೆಡ್ ಲೈನ್ ಆಗಲು ಜನರು ಸಂದರ್ಶನಗಳಲ್ಲಿ ಸುಳ್ಳು ಹೇಳುತ್ತಾರೆ, ಇದು ತಮಾಷೆಯಾಗಿದೆ. ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಹಾತೊರೆಯುತ್ತಿರುವುದು ದುಃಖಕರವಾಗಿದೆ. ದೇವರು ಅವರನ್ನು ಆಶೀರ್ವದಿಸಲಿ ಎಂದಿದ್ದರು.