ಭಾರತೀಯ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಭಾರತೀಯ ಬಳಕೆದಾರರಿಗೆ ಡಿಜಿಟಲ್ ಪಾವತಿಗಳನ್ನು ಹೆಚ್ಚು ಬಳಸುವಂತೆ ಮಾಡುವ ಪ್ರಸ್ತಾವನೆಯನ್ನು ಹೊರಡಿಸಿದೆ.
ಟ್ರಾಯ್ನ ಈ ಪ್ರಸ್ತಾವವನ್ನು ಭಾರತೀಯ ಗ್ರಾಹಕರಿಗೆ ಅನ್ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ ಸಂದೇಶವನ್ನು ಉಚಿತವಾಗಿ ನೀಡಲು ಬಯಸುತ್ತದೆ. ಇಂಟರ್ನೆಟ್ ಸೌಕರ್ಯವನ್ನು ಹೊಂದಿರದ ಮೊಬೈಲ್ಗಳಲ್ಲಿ ಬ್ಯಾಂಕಿಂಗ್ ಹಾಗೂ ಸಿಮ್ ಸೇವೆಗಳಿಗಾಗಿ USSDಯನ್ನು ಬಳಸಲಾಗುತ್ತದೆ. ಪ್ರಸ್ತುತ USSD ಸಂದೇಶಗಳಿಗೆ ಗರಿಷ್ಠ 50 ಪೈಸೆ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಸರ್ಕಾರವು ಇದನ್ನು ಉಚಿತವಾಗಿ ನೀಡುವ ಪ್ರಸ್ತಾವನೆ ಹೊಂದಿದೆ.
USSD ಸಂದೇಶಗಳನ್ನು ಎಲ್ಲಾ ಬಳಕೆದಾರರಿಗೆ ಉಚಿತವಾಗಿ ನೀಡುವ ಉದ್ದೇಶ ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿತ ಡಿಜಿಟಲ್ ಪಾವತಿಗಳನ್ನು ಜನರು ಹೆಚ್ಚಾಗಿ ಬಳಸುವಂತೆ ಮಾಡುವುದೇ ಈ ಪ್ರಸ್ತಾವನೆಯ ಮುಖ್ಯ ಉದ್ದೇಶವಾಗಿದೆ ಎಂದು ಟ್ರಾಯ್ ಹೇಳಿದೆ.
ಟ್ರಾಯ್ ಈ ಹಿಂದೆ ಯುಎಸ್ಎಸ್ಡಿ ಆಧಾರಿತ ಬ್ಯಾಂಕಿಂಗ್ ಹಾಗೂ ಪಾವತಿ ಸೇವೆಗಳಿಗೆ 2016ರಲ್ಲಿ ಸುಂಕವನ್ನು 1.5 ರೂಪಾಯಿಯಿಂದ 0.5 ರೂಪಾಯಿಗೆ ಇಳಿಕೆ ಮಾಡಿತ್ತು.