ಬೆಂಗಳೂರು : ಇದು ಸಿದ್ದರಾಮಯ್ಯನವರ ಕೊನೆ ಬಜೆಟ್ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬಜೆಟ್ ಗೂ ಮುನ್ನ ಮಾತನಾಡಿದ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಸದ್ಯದಲ್ಲೇ ಸರ್ಕಾರ ಬಿದ್ದೋಗತ್ತೆ, ಅಷ್ಟರಲ್ಲಿ ಎಷ್ಟು ಬಾಚಿಕೊಳ್ಳಬೇಕು ಎಂದು ಅಂದುಕೊಂಡಿದ್ದಾರೆ. ಸರ್ಕಾರ ಪಾಪರ್ ಆಗಿದೆ, ಮನೆಹಾಳ ಸಿದ್ದರಾಮಯ್ಯ, ಇದು ಸಿದ್ದರಾಮಯ್ಯನವರ ಕೊನೆ ಬಜೆಟ್ ಎಂದು ಆರ್ ಅಶೋಕ್ ತೀವ್ರವಾಗಿ ವಾಗ್ಧಾಳಿ ನಡೆಸಿದ್ದಾರೆ.
ಇದು ಕೊಡುವ ಬಜೆಟ್ ಅಲ್ಲ, ಕಿತ್ತುಕೊಳ್ಳುವ ಬಜೆಟ್. ಸಿದ್ದರಾಮಯ್ಯರನ್ನು ಚಾಂಪಿಯನ್ ಅಂತಾರೆ. ಸಿದ್ದರಾಮಯ್ಯ ದೋಚುವುದರಲ್ಲಿ ಮಾತ್ರ ಚಾಂಪಿಯನ್. ರಾಜ್ಯದ ಜನರ ಮೇಲೆ ಸಾಲ ಹೊರಿಸಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.