alex Certify ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿಯನ್ನು ಎತ್ತಿಕೊಂಡ ಗ್ರೇಟ್ ಖಲಿ; ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿಯನ್ನು ಎತ್ತಿಕೊಂಡ ಗ್ರೇಟ್ ಖಲಿ; ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

'This Is Bad Touch': Netizens Divided Over Great Khali's 'Inappropriate' Bonding With World's Shortest Woman Jyoti Amge

ಭಾರತದ ಹಿರಿಯ ಕುಸ್ತಿಪಟು ದಿ ಗ್ರೇಟ್ ಖಲಿ ಅವರು ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂಬ ಮಾತು ಕೇಳಿಬಂದಿದ್ದು, ಇದಕ್ಕೆ ಇಂಟರ್ನೆಂಟ್ ನಲ್ಲಿ ಪರ- ವಿರೋಧ ಚರ್ಚೆಯಾಗಿದೆ.

ಕುಬ್ಜ ಮಹಿಳೆ ಜ್ಯೋತಿ ಅಮ್ಗೆ ಅವರನ್ನು ಕೈಯಲ್ಲಿ ಹಿಡಿದುಕೊಂಡ ದಿ ಗ್ರೇಟ್ ಖಲಿ ಆಕೆಯನ್ನು ಕೈಯಲ್ಲಿ ತಿರುಗಿಸುತ್ತಾ, ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾರೆ. ಈ ವೇಳೆ ಅವರಿಬ್ಬರೂ ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುವಂತೆ ಕಾಣುತ್ತದೆ.

ಕೇವಲ 62.8 ಸೆಂಟಿಮೀಟರ್‌ಗಳಷ್ಟು (2 ಅಡಿ 3/4 ಇಂಚುಗಳು) ಎತ್ತರದ ಜಗತ್ತಿನ ಅತ್ಯಂತ ಕುಬ್ಬ ಮಹಿಳೆ ಎಂದು ಕರೆಸಿಕೊಂಡಿರುವ 30 ವರ್ಷ ವಯಸ್ಸಿನ ಜ್ಯೋತಿ ಅಮ್ಗೆ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿದ್ದಾರೆ. ಅವರು ನಟನಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಆಮ್ಗೆ ಅವರು ಬಿಗ್ ಬಾಸ್ 6 ನಲ್ಲಿ ಅತಿಥಿ ಭಾಗವಹಿಸಿದ್ದರು ಮತ್ತು ಅಮೇರಿಕನ್ ಹಾರರ್ ಸ್ಟೋರಿ: ಫ್ರೀಕ್ ಶೋನ 4 ನೇ ಸೀಸನ್‌ನಲ್ಲಿ ಮಾ ಪೆಟೈಟ್ ಪಾತ್ರವನ್ನು ನಿರ್ವಹಿಸಿದರು.

ಇಂತಹ ಜ್ಯೋತಿ ಅಮ್ಗೆ ಅವರನ್ನು ಅಸಭ್ಯವಾಗಿ ಹಿಡಿದುಕೊಂಡಿದ್ದಾರೆ ಎಂದು ದಿವ್ಯಾ ಗಂಡೋತ್ರಾ ಟಂಡನ್ ಎಂಬುವವರು ಟ್ಟಿಟರ್ ನಲ್ಲಿ ದಿ ಗ್ರೇಟ್ ಅಲಿ ಅವರನ್ನು ಟೀಕಿಸಿದ್ದಾರೆ.

“ಮಗುವಲ್ಲದ 30 ವರ್ಷದ ಮಹಿಳೆ ಜ್ಯೋತಿ ಅಮ್ಗೆ ಅವರನ್ನು ಈ ರೀತಿ ನಡೆಸಿಕೊಳ್ಳುವುದು ತುಂಬಾ ಅನುಚಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರ ಎತ್ತರ ಕಡಿಮೆಯಾದರೂ, ಅವರು ಇತರ ಮಹಿಳೆಯಂತೆಯೇ ಅದೇ ಘನತೆಯನ್ನು ಹೊಂದಿದ್ದಾರೆ. ದಲೀಪ್ ಸಿಂಗ್ ರಾಣಾ (ಗ್ರೇಟ್ ಖಲಿ) ಅವಳನ್ನು ಅನುಚಿತವಾಗಿ ತನ್ನ ಕೈಯಲ್ಲಿ ಎತ್ತಿಕೊಂಡು ನಂತರ ಅವಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡರು. ಇದು ಇನ್ನೂ ಕೆಟ್ಟದಾಗಿದೆ. ಅವಳು ಮಗುವೂ ಅಲ್ಲ, ಗೊಂಬೆಯೂ ಅಲ್ಲ ಎಂದು ದಿ ಗ್ರೇಟ್ ಅಲಿಗೆ ಟ್ಯಾಗ್ ಮಾಡಿ ಟೀಕಿಸಿದ್ದಾರೆ.

ಜ್ಯೋತಿ ಅಮ್ಗೆ ಜೊತೆ ಗ್ರೇಟ್ ಖಲಿಯ ನಡೆ ಬಗ್ಗೆ ಟೀಕಿಸಿದ ದಿವ್ಯಾ ಗಂಡೋತ್ರಾ ಟಂಡನ್ ಅವರನ್ನ ಹಲವು ಸಾಮಾಜಿಕ ಬಳಕೆದಾರರು ಟೀಕಿಸಿದ್ದು, ಎಲ್ಲವನ್ನೂ ಹಳದಿ ಕಣ್ಣಿಂದ ನೋಡುವುದನ್ನು ನಿಲ್ಲಿಸಿ. ಅವರಿಬ್ಬರೂ ಈ ಕ್ಷಣಗಳನ್ನು ನಗುತ್ತಾ ಕಳೆಯುತ್ತಿರುವಾಗ ನಿಮಗೇನು ಸಮಸ್ಯೆ ಎಂದಿದ್ದಾರೆ. ಕೆಲವರು ದಿವ್ಯಾ ಗಂಡೋತ್ರ ಅವರ ಮಾತಿಗೆ ದನಿಗೂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...