ಓದಬೇಕೆಂದಿದ್ದೀರಾ? ಅದಕ್ಕೆ ಮನಸ್ಸಿಲ್ಲವೆ? ಮುಖ್ಯವಾಗಿ ತಲೆಯಲ್ಲಿ ಖಾಲಿಯಾದಂತಹ ಅನುಭವ ಉಂಟಾಗುತ್ತಿದೆಯೆ? ಏನನ್ನು ಮಾಡಲು ಮನಸ್ಸಿಲ್ಲವೇ? ಓದಿದ್ದನ್ನು ಮಕ್ಕಳು ಮರೆತು ಹೋಗುತ್ತಿದ್ದಾರಾ? ಹಾಗಾದರೆ ಆಸಕ್ತಿಕರವಾದ ಈ ವಿಟಮಿನ್ ಬಗ್ಗೆ ತಿಳಿದುಕೊಳ್ಳಲೇಬೇಕು.
ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ವಿಟಮಿನ್ ಸಿ ಕೃತಕ ಅನ್ನಾಂಗದಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿದು ಬಂದಿದೆ. ನಮ್ಮ ದೇಹ ವಿಟಮಿನ್ ಸಿ ಯನ್ನು ತಯಾರಿಸಿಕೊಳ್ಳದು. ಅದೇ ರೀತಿ ಸಂಗ್ರಹಿಸಿಕೊಳ್ಳದು. ಆದ ಕಾರಣ ನಾವು ಪ್ರತಿದಿನ ‘ವಿಟಮಿನ್ ಸಿ’ಯನ್ನು ಯಾವುದೋ ಒಂದು ರೂಪದಲ್ಲಿ ಆಹಾರದ ಮೂಲಕ ಸೇವಿಸಬೇಕು. ಆಹಾರದಲ್ಲಿ ನಿಯಮಿತವಾಗಿ ಅಥವಾ ಸೂಕ್ತ ಪ್ರಮಾಣದಲ್ಲಿ ‘ವಿಟಮಿನ್ ಸಿ’ಯನ್ನು ಸೇವಿಸುವುದು ಅತ್ಯಗತ್ಯ. ಹಾಗೆಂದು ಹೆಚ್ಚಾಗಿ ಸೇವಿಸಿದರೆ ಅನಾರೋಗ್ಯ ಕಾಡದೆ ಬಿಡದು.
ಸಾಮಾನ್ಯವಾಗಿ ಧೂಮಪಾನ ಮಾಡುವವರಲ್ಲಿ, ಹಣ್ಣು-ತರಕಾರಿ ಕಡಿಮೆ ತಿನ್ನುವವರಲ್ಲಿ, ಮಕ್ಕಳು ಹುಟ್ಟದಿರಲು ಮಾತ್ರೆ ಸೇವಿಸುವವರಲ್ಲಿ ಈ ವಿಟಮಿನ್ ಕೊರತೆಯುಂಟಾಗುತ್ತದೆ.
ಚೆರಿ, ಸೀಬೆ, ಪರಂಗಿ, ಕಿವಿ, ಕಿತ್ತಳೆ, ದ್ರಾಕ್ಷಿ, ಪೈನಾಪಲ್, ಮಾವಿನಂತಹ ಹುಳ್ಳಗಿರುವ ಹಣ್ಣುಗಳಲ್ಲಿ, ಕ್ಯಾಪ್ಸಿಕಂ, ಬ್ರಕೋಲಿ, ಟೊಮೆಟೊನಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ವಿಟಮಿನ್-ಸಿ ಮೆದುಳು ಚುರುಕಾಗಿ ಚಟುವಟಿಕೆಯಿಂದ ಇರುವಂತೆ ಮಾಡುವುದಲ್ಲದೆ, ಗ್ರಹಣ ಶಕ್ತಿ ಹೆಚ್ಚಿಸಿ ಮರೆವನ್ನು ದೂರ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮುಖ್ಯವಾಗಿ ಪರೀಕ್ಷೆಯ ಸಮಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.