ನಾವು ಬಯಸಿದಂತೆ ಜೀವನವಿರುವುದಿಲ್ಲ. ಕಷ್ಟವಿಲ್ಲದ ಜೀವನ ಯಾರಿಗೂ ಸಿಗಲು ಸಾಧ್ಯವಿಲ್ಲ. ಕಷ್ಟದ ಸಂದರ್ಭದಲ್ಲಿ ಜನರು ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕಣ್ಣಿಗೆ ಕಾಣದ ಕೆಲ ವಿಷ್ಯಗಳ ಬಗ್ಗೆಯೂ ಗಮನ ನೀಡುತ್ತಾರೆ. ಮನೆ ವಾಸ್ತು, ಮನೆಯಲ್ಲಿರುವ ವಸ್ತುಗಳು ಹಾಗೂ ಅವ್ರ ಜೀವನದಲ್ಲಾಗುತ್ತಿರುವ ಬದಲಾವಣೆಗಳನ್ನು ತುಲನೆ ಮಾಡಲು ಶುರು ಮಾಡುತ್ತಾರೆ. ಇದು ಮೂಢನಂಬಿಕೆಯಲ್ಲ. ಧರ್ಮಗ್ರಂಥಗಳಲ್ಲಿಯೂ ಈ ವಿಷ್ಯಗಳನ್ನು ಹೇಳಲಾಗಿದೆ.
ನಿಮ್ಮ ಮನೆಯಲ್ಲೂ ಕೆಲವೊಂದು ಬದಲಾವಣೆಯಾಗ್ತಿದ್ದರೆ ಎಚ್ಚರಿಕೆಯಿಂದಿರಿ. ಇದು ಕೆಲ ಕಷ್ಟದ ದಿನಗಳ ಮುನ್ಸೂಚನೆಯಾಗಿರುವ ಸಾಧ್ಯತೆಯಿದೆ.
ಮನೆಯಲ್ಲಿರುವ ಗಡಿಯಾರ ಪದೇ ಪದೇ ಬಂದ್ ಆಗ್ತಿದ್ದರೆ ಎಚ್ಚೆತ್ತುಕೊಳ್ಳಿ. ಇದು ಅಶುಭವೆಂದು ಪರಿಗಣಿಸಲಾಗಿದೆ. ಕುಟುಂಬ ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಲಿದೆ ಎಂಬುದರ ಸಂಕೇತವಾಗಿದೆ.
ಅಡುಗೆ ಮನೆಯಲ್ಲಿಯೇ ಇದ್ದರೂ ಅರೆ ಕ್ಷಣದಲ್ಲಿ ಹಾಲು ಉಕ್ಕಿ ಕೆಳಗೆ ಬೀಳುವುದುಂಟು. ಇದೇ ಘಟನೆ ಪದೇ ಪದೇ ಆಗ್ತಿದ್ದರೆ ಅದನ್ನು ಅಶುಭವೆನ್ನಲಾಗುತ್ತದೆ. ಮನೆಯಲ್ಲಿ ಧನಹಾನಿಯಾಗುವ ಸಂಕೇತ ಇದಾಗಿದೆ. ಮನೆಯ ಮೇಲ್ಚಾವಣಿಗೆ ಹಾಕಿರುವ ಪ್ಲಾಸ್ಟರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ಅಥವಾ ಮನೆ ಛಾವಣಿ ಮೇಲೆ ಮೂಳೆಗಳು ಬಿದ್ದರೆ ಇದು ಅಹಿತಕರ ಘಟನೆಯ ಮುನ್ಸೂಚನೆಯಾಗಿದೆ.
ಮನೆಯ ಕಿಟಕಿಗಳು, ಗಡಿಯಾರ ಅಥವಾ ಅಡುಗೆಮನೆಯಲ್ಲಿ ಇರುವ ಗಾಜು ಇದ್ದಕ್ಕಿದ್ದಂತೆ ಒಡೆದರೆ ಅದು ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಕುಟುಂಬದ ಸದಸ್ಯರ ಆರೋಗ್ಯ ಹದಗೆಡುವ ಸೂಚನೆಯಾಗಿದೆ.
ಯಾವುದೇ ಕಾರಣವಿಲ್ಲದೆ ಮನೆಯ ಗೋಡೆಗಳು ಬಿರುಕು ಬಿಡಲು ಪ್ರಾರಂಭಿಸಿದರೆ, ಅದು ಮುಂಬರುವ ಸಮಯದಲ್ಲಿ ಆರ್ಥಿಕ ನಷ್ಟದ ಸಂಕೇತವಾಗಿದೆ.