ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು.
* ಅಸಿಡಿಟಿಯಿಂದ ಹೊಟ್ಟೆ ನೋವು ಬಂದರೆ ಎಳನೀರು ಅಥವಾ ತಣ್ಣನೆಯ ಹಾಲು ಸೇವಿಸಬೇಕು.
* ಅಜೀರ್ಣದಿಂದ ಹೊಟ್ಟೆನೋವು ಬಂದಲ್ಲಿ ಒಂದು ಗ್ಲಾಸ್ ನೀರಿಗೆ 1 ನಿಂಬೆ ಹಣ್ಣಿನ ರಸ ಹಿಂಡಿ ಅದರಲ್ಲಿ ಜೇನು ಮಿಶ್ರಣ ಮಾಡಿ ಕುಡಿಯಬೇಕು.
* ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಬಂದಲ್ಲಿ ಪುದೀನಾ, ಶುಂಠಿ, ನಿಂಬೆರಸ, ಚಿಟಿಕೆ ಉಪ್ಪು ಬೆರೆಸಿದ ನೀರನ್ನು ಕುಡಿಯಬಹುದು.
* ಎಂತಹ ಹೊಟ್ಟೆನೋವು ಆಗಿರಲಿ ಪುಟ್ಟ ಕಪ್ ಮೊಸರಿನಲ್ಲಿ 1 ಸ್ಪೂನ್ ಗಳಷ್ಟು ಮೆಂತ್ಯದ ಪುಡಿಯನ್ನು ಬೆರೆಸಿ ಸೇವಿಸಬೇಕು. ಇದು ಜೀರ್ಣ ವ್ಯವಸ್ಥೆಯನ್ನು ಸುಗಮವಾಗಿಡುತ್ತದೆ.
* ಸ್ಪಷ್ಟವಾಗಿ ನೋವು, ಯಾವುದಾದರೂ ಕಿರಿಕಿರಿ ಇದ್ದಾಗ ಒಂದು ಸೋಂಪು ಹೂವನ್ನು ಬಾಯಲ್ಲಿಟ್ಟುಕೊಂಡು ಅದರ ರಸ ಹೀರಬೇಕು.
* ಸೋಂಪನ್ನು ಒಂದು ಗ್ಲಾಸ್ ನೀರಲ್ಲಿ ರಾತ್ರಿಯಲ್ಲಾ ನೆನೆಸಿಟ್ಟು ಮುಂಜಾನೆ ಅದರ ನೀರನ್ನು ಕುಡಿದು ಸೋಂಪನ್ನು ಅಗಿದು ನುಂಗಬೇಕು. ನಾಲ್ಕೈದು ದಿನ ಹೀಗೆ ಮಾಡಿದ್ದಲ್ಲಿ ಹೊಟ್ಟೆಯುಬ್ಬರ, ಗ್ಯಾಸ್, ಹಸಿವೆ ಮುಂತಾದ ಸಮಸ್ಯೆಗಳು ದೂರವಾಗುತ್ತದೆ.